ಪತ್ರಕರ್ತರು ಪ್ರಾಮಾಣಿಕರಾಗಿದ್ದು ಕರ್ತವ್ಯನಿಷ್ಟೆಯಿ0ದ ದುಡಿಯಬೇಕು: ಡಾ| ಸುರೇಂದ್ರ ಶೆಟ್ಟಿ

ಮುಂಬಯಿ, ಎ.14: ಎಲ್ಲೇ ಇರಲಿ, ಅತಿಥಿsಗಳನ್ನು ಸತ್ಕರಿಸುವುದು ಕನ್ನಡಿಗರ ರಕ್ತ ಗುಣ.ಇದಕ್ಕೆ ಹೊರನಾಡ ಕನ್ನಡಿಗರಿಗೂ ಹೊರತಲ್ಲ. ಮು0ಬಯಿ ಗೆ ಬ0ದ ಕನ್ನಡ ದೇಶಾದ್ಯ0ತದಿ0ದ ಪತ್ರಕರ್ತರಿಗೆ ಆತಿಥ್ಯ ನೀಡಲು ನನಗೆ ಅತೀವ ಸ0ತಸವಾಗುತ್ತಿದೆ. ಕನ್ನಡಿಗ ಪತ್ರಕರ್ತರ ಸ0ಘ ಮಹಾರಾಷ್ಟ್ರ ಇದರ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮ್ಮೇಳನದ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಪತ್ರಕರ್ತರು ಭೀತಿ ಹುಟ್ಟಿಸಕೂಡದು.. ಪ್ರಾಮಾಣಿಕರಾಗಿದ್ದು ಕರ್ತವ್ಯನಿಷ್ಟೆಯಿ0ದ ದುಡಿಯಬೇಕು ಎಂದು ಉಪನಗರ ಕಲ್ಯಾಣ್ ಅಲ್ಲಿನ ಜಸ್ಮೀನ್ ಗ್ರೂಪ್ ಆಫ್ ಕಂಪೇನಿಸ್‍ನ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ.ಶೆಟ್ಟಿ ಕರೆಯಿತ್ತರು.

ಕಳೆದ ಶನಿವಾರ ಸಂಜೆ ಉಪನಗರ ಥಾಣೆ ಪಶ್ಚಿಮದಲ್ಲಿನ ಹೊಟೇಲ್ ರತ್ನ ಪಾರ್ಕ್‍ನ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸಮ್ಮೇಳನಾಧ್ಯಕ್ಷತೆಯಲ್ಲಿ ಆಯೋಜಿಸಿರುವ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶದ ಸ್ನೇಹಮಿಲನವನ್ನು ಉದ್ಘಾಟಿಸಿ ಡಾ| ಸುರೇಂದ್ರ ವಿ.ಶೆಟ್ಟಿ ಮಾತನಾಡಿದರು.

ಜಸ್ಮೀನ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಕನ್ನಡ ಪತ್ರಕರ್ತರ ಸಮಾವೇಶದ ಸ್ನೇಹಮಿಲನ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಿಪೆರ್ಟರ್ಸ್ ಗೀಲ್ಡ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರ್, ಗೌರವ ಅತಿಥಿಗಳಾಗಿ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಉದಯವಾಣಿ ದೈನಿಕದ ಮಂಗಳೂರು ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರ್ ಪ್ರಸಾದ್, ಅಕ್ಷಯ ಮಾಸಿಕದ ಆಡಳಿತ ಸಂಪಾದಕ ನಿತ್ಯಾನಂದ ಡಿ.ಕೋಟ್ಯಾನ್, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಡಿ, ಹೊಟೇಲ್ ರತ್ನ ಪಾರ್ಕ್‍ನ ಮಾಲಕ ರತ್ನಾಕರ ಜಿ.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು ಡಾ| ಸುರೇಂದ್ರ ವಿ.ಶೆಟ್ಟಿ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ (ಪರವಾಗಿ ನಿತ್ಯಾನಂದ ಕೋಟ್ಯಾನ್) ಅವರನ್ನು ಸ್ಮರಣಿಕೆಯನ್ನೀಡಿ ಗೌರವಿಸಲಾಯಿತು.

ಮನೋಹರ್ ಪ್ರಸಾದ್ ಮಾತನಾಡಿ ಪತ್ರಿಕೋದ್ಯಮ ಭಾಷೆಯ ಮೇಲೆ ನಿರ್ಮಾಣಗಿದೆ. ಆದ್ದರಿ0ದ ಭಾಷೆಯನ್ನುಳಿಸುವುದೂ ಅಷ್ಟೇ ಅಗತ್ಯ. ಪತ್ರಕರ್ತನಿಗೆ ಭಾಷಾ ಶುದ್ದಿ, ವ್ಯಾಕರಣ ತಿಳುವಳಿಕೆ ಕೂಡಾ ಅಗತ್ಯ. ವರದಿಗಾರಿಕೆ ಯಾರೂ ಮಾಡಬಹುದು, ಕೇವಲ ಸುದ್ದಿ ಸ0ಗ್ರಹಿಸುವುದಷ್ಟೇ ಪತ್ರಿಕೋದ್ಯಮವಾಗದು, ಅದನ್ನು ಸೂಕ್ತ ಸಮರ್ಪಕ ಭಾಷೆಯ ಮೂಲಕ ನೀಡುವುದೂ ಅಷ್ಟೇ ಮುಖ್ಯ ಎಂದರು.

ಇದೇ ಸಂದರ್ಭದಲ್ಲಿ ಸಮಾವೇಶಕ್ಕೆ ಅವಿರತ ಶ್ರಮಿಸಿದ ಸಮಾವೇಶದ ಪ್ರಾಯೋಜಕ ಶಿವ ಮೂಡಿಗೆರೆ, ಕಪಸಮ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ (ಪ್ರೆಸ್ ಕ್ಲಬ್, ಮುಂಬಯಿ), ಬಾಬು ಕೆ.ಬೆಳ್ಚಡ, ಸಂದೇಶ್ ಎಸ್.ಶೆಟ್ಟಿ ಅವರನ್ನು ಕೆ.ವಿ ಪ್ರಭಾಕರ್ ಅವರು ಸಮಾವೇಶ ಸ್ಮರಣಿಕೆಯನ್ನೀಡಿ ಗೌರವಿಸಿದರು. ಕಪಸಮ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ದಯಾ ಸಾಗರ್ ಚೌಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ಧನ ಎಸ್. ಪುರಿಯಾ ಅಭಾರ ಮನ್ನಿಸಿದರು.

 

LEAVE A REPLY

Please enter your comment!
Please enter your name here