ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ
ರೋನ್ಸ್ ಬಂಟ್ವಾಳ್ (ಅಧ್ಯಕ್ಷ) – ಸಾ.ದಯಾ (ಗೌ| ಪ್ರ| ಕಾರ್ಯದರ್ಶಿ)

ಮುಂಬಯಿ, ಜು.17: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2022-2025ರ ಸಾಲಿನ ಪದಾಧಿಕಾರಿಗ ಳ ಆಯ್ಕೆ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದ ಮನಿಫೋಲ್ಡ್ ಸಭಾಗೃಹದಲ್ಲಿ ಸಂಘದ ಹಿರಿಯ ಸಲಹಾಗಾರರು, ಮುಂಬಯಿ ಉಚ್ಛನ್ಯಾಯಲಯದ ವಕೀಲೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಆಯ್ಕೆಪ್ರಕ್ರಿಯೆ ನಡೆಸಲಾಗಿದ್ದು ರೋನ್ಸ್ ಬಂಟ್ವಾಳ್ ಅಧ್ಯಕ್ಷರಾಗಿ ಪುನಾರಾಯ್ಕೆ ಗೊಂಡರು. ಉಪಾಧ್ಯಕ್ಷರಾಗಿ ಡಾ| ಶಿವ ಮೂಡಿಗೆರೆ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಸಾ.ದಯಾ (ದಯಾನಂದ್ ಸಾಲ್ಯಾನ್), ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ (ಗೌರವ ಕೋಶಾಧಿಕಾರಿ) ಅವರನ್ನು ಸರ್ವಾನುಮತದಿಂದ ಸಭೆಯು ಆಯ್ಕೆ ಗೊಳಿಸಿತು.

ಸಂಘದ ಕಾರ್ಯಕಾರಿ ಸಮಿತಿಗೆ ಇತ್ತೀಚೆಗೆ 16 ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಆಯ್ದ ನೂತನ ಸದಸ್ಯರಲ್ಲಿ ಪದಾಧಿಕಾರಿಗಳಾಗಿ ಸವಿತಾ ಸುರೇಶ್ ಶೆಟ್ಟಿ (ಜೊತೆ ಕಾರ್ಯದರ್ಶಿ), ಡಾ| ದುರ್ಗಪ್ಪ ವೈ. ಕೋಟಿಯಾವರ್ (ಜೊತೆ ಕೋಶಾಧಿಕಾರಿ), ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಂಗ ಎಸ್.ಪೂಜಾರಿ, ಡಾ| ಜಿ.ಪಿ ಕುಸುಮಾ, ಡಾ| ದಿನೇಶ್ ಶೆಟ್ಟಿ ರೆಂಜಾಳ, ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ, ನಾಗೇಶ್ ಪೂಜಾರಿ ಏಳಿಂಜೆ, ಅನಿತಾ ಪಿ.ಪೂಜಾರಿ ತಾಕೋಡೆ, ಜಯಂತ್ ಕೆ.ಸುವರ್ಣ, ನಾಗರಾಜ್ ಕೆ.ದೇವಾಡಿಗ, ಪೀಟರ್ ಎಫ್.ಡಿಸೋಜಾ, ಕರುಣಾಕರ್ ವಿ.ಶೆಟ್ಟಿ ಮತ್ತು ಗೋಪಾಲ ಪೂಜಾರಿ ತ್ರಾಸಿ, ಶ್ಯಾಮ ಎಂ.ಹಂಧೆ, ಸದರಾಮ ಎನ್.ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ವಿಶೇಷ ಆಮಂತ್ರಿತ ಸದಸ್ಯ, ನಿಯೋಜಿತ ಚುನಾವಣಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿದ್ದರು.

ಸಲಹಾ ಸಮಿತಿ ಸದಸ್ಯರಾಗಿ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಡಾ| ಆರ್.ಕೆ.ಶೆಟ್ಟಿ, ಡಾ| ಸುರೇಶ್ ಎಸ್.ರಾವ್, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಸುರೇಂದ್ರ ಎ.ಪೂಜಾರಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಸಿಎ| ಜಗದೀಶ್ ಬಿ.ಶೆಟ್ಟಿ, ಶಶಿಧರ್ ಬಿ.ಶೆಟ್ಟಿ (ಬರೋಡ), ಗ್ರೇಗೋರಿ ಡಿ’ಅಲ್ಮೇಡಾ, ಲಕ್ಷ್ಮಣ್ ಸಿ. ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರಾಗಿ ಅಶೋಕ ಎಸ್.ಸುವರ್ಣ, ಸದಾನಂದ ಕೆ.ಸಫಲಿಗ, ಡಾ| ಶಿವರಾಮ ಕೆ.ಭಂಡಾರಿ, ಹರೀಶ್ ಪೂಜಾರಿ ಕೊಕ್ಕರ್ಣೆ, ನ್ಯಾಯವಾದಿ ಅಮಿತಾ ಎಸ್.ಭಾಗ್ವತ್, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಚಂದ್ರಶೇಖರ್ ಆರ್.ಬೆಳ್ಚಡ, ಸತೀಶ್ ಎಸ್.ಸಾಲ್ಯಾನ್ ಇವರನ್ನು ಸಭೆಯು ಆಯ್ಕೆ ಗೊಳಿಸಿತು.

ಸಂಘವು ಹದಿನೈದನೇ ವಾರ್ಷಿಕೋತ್ಸವದ ಸಡಗರದಲ್ಲಿದ್ದು ಐದನೇ ಬಾರಿಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಇದಾಗಿದೆ. ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆಗೈದರು, ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಅಭಿವಂದಿಸಿದರು. ಈ ಸಂದರ್ಭದಲ್ಲಿ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಕಡಂದಲೆ ಸುರೇಶ್ ಎಸ್.ಭಂಡಾರಿ, ಸದಾನಂದ ಕೆ.ಸಾಫಲ್ಯ ಇವರನ್ನು ವಿಶೇಷವಾಗಿ ಪುಷ್ಫಗುಪ್ಚ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಅಶೊಕ ಎಸ್.ಸುವರ್ಣ ಸಭಾ ಕಲಾಪ ನಡೆಸಿದರು.ಸವಿತಾ ಸುರೇಶ್ ಶೆಟ್ಟಿ ಅಭಾರ ಮನ್ನಿಸಿದರು.

LEAVE A REPLY

Please enter your comment!
Please enter your name here