ವಿಶೇಷ ಮಹಾಸಭೆ-ಆಯ್ಕೆಪ್ರಕ್ರಿಯೆ ನಡೆಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ

ಮೇ.01: ಯಾವೊತ್ತೋ ಸೋಶಿಯಲ್ ವಿೂಡಿಯಾ ಬಗ್ಗೆ ನಾನು ತಲೆ ಕೆಡಿಸಿಲ್ಲ. ಬದಲಾಗಿ ಸೋಶಿಯಲ್ ವರ್ಕ್ ಎಷ್ಟು ಪ್ರಾಮಾಣಿಕವಾಗಿ ಮಾಡಲು ಸಾಧ್ಯ ಅನ್ನುವುದನ್ನಷ್ಟೇ ಚಿಂತಿಸಿರುವೆ. ಸಂಬಂಧಗಳನ್ನು ನಿಭಾಯಿಸುವುದು ಕೇವಲ ಎಲ್ಲರನ್ನು ಗೆಲ್ಲುವುದರಿಂದ ಸಾಧ್ಯವಿಲ್ಲ. ಒಂದು ಉತ್ತಮ ಸಂಬಂಧವನ್ನು ನಿಭಾಯಿಸುವಲ್ಲಿ ಕೆಲವೊಮ್ಮೆ ನಾವು ಕೆಲವರ ಮುಂದೆ ಬಾಗಬೇಕಾಗುತ್ತದೆ. ಅವರೊಂದಿಗೆ ಹಗಲಿರುಳು ಇರಬೇಕಾಗುತ್ತದೆ. ಕೆಲವರನ್ನು ಸಹಿಸಿ ಕೊಳ್ಳಬೇಕಾಗುತ್ತದೆ. ಬೇರೆಯವರನ್ನು ಗೆಲ್ಲ ಬೇಕಾಗುತ್ತದೆ. ಮತ್ತು ಸ್ವತಃ ಸೋಲಬೇಕಾಗುತ್ತದೆ. ಇದನ್ನು ಮೈಗೂಡಿಸಿದ ಪರಿಣಾಮ ಪತ್ರಕರ್ತರ ಈ ಸಂಘ ರಾಷ್ಟ್ರೀಯ ಮಾನ್ಯತೆಗೆ ಪಾತ್ರವಾಗಿದೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಅಂಧೇರಿ ಪೂರ್ವದ ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್‍ನÀ ಕ್ಲಬ್ ಹೌಸ್ ಸಭಾಗೃಹದಲ್ಲಿ ನಡೆಸಿದ ಸಂಘದ ವಿಶೇಷ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ್, ಯಶಸ್ಸು ಎಂದರೆ ನಾವು ಎಷ್ಟು ಬೆಳೆದೆವು ಅಥವಾ ನಾವು ಎಷ್ಟು ಸಂಪಾದಿಸಿದೆವು ಅನ್ನುವುದಲ್ಲ. ಆದರೆ ನಮ್ಮ ಬೆಳವಣಿಗೆಯಿಂದ ಎಷ್ಟು ಜನರ ಕಷ್ಟ ನೀಗಿತು ಎನ್ನುವುದೇ ಯಶಸ್ಸು. ಇದನ್ನೇ ನಮ್ಮ ಕಪಸಮ ಸಮಿತಿ ಕರೋನಾದ ಸಂಧಿಗ್ಧ ಕಾಲದಲ್ಲೂ ಸದಸ್ಯರ ಪರನಿಂತು ಸಿದ್ಧಿಸಿದೆ. ನಂಬಿಕೆ ಎನ್ನುವುದು ಸಣ್ಣ ಪದವಾದರೂ ಜೀವನದಲ್ಲಿ ಅದ್ಭುತ ಪರಿಣಾಮವನ್ನು ಬೀರುತ್ತದೆ. ದುರದೃಷ್ಟವೆಂದರೆ, ಇವತ್ತು ನಮಗೆ ನಂಬಿಕೆಗಳ ಮೇಲೇ ಅನುಮಾನ ಹಾಗೂ ಅನುಮಾನಗಳ ಮೇಲೆ ಹೆಚ್ಚು ನಂಬಿಕೆ ಇರುವುದೇ ದುರದೃಷ್ಟಕರ. ಆದುದರಿಂದ ಸಂಘಸಂಸ್ಥೆಗಳನ್ನು ಮುನ್ನಡೆಸಲು ಅಸಾಧ್ಯವಾಗುತ್ತಿದೆ ಎಂದರು.

ಸಭೆಯ ಮೊದಲ ಭಾಗವಾಗಿ ಸಂಘದ ಕಟ್ಟಳೆಗಳ ತಿದ್ದುಪಡಿ ನಡೆಸಲಾಯಿತು. ಕಟ್ಟಳೆ ತಿದ್ದುಪಡಿಯ ಪ್ರಧಾನ ಜವಾಬ್ದಾರಿ ವಹಿಸಿದ ಸಾ.ದಯಾ ತಿದ್ದುಪಡಿಯಲ್ಲಿನ ಕೆಲವೊಂದು ಮುದ್ರಣ ದೋಷ, ತಿದ್ದಾಣಿಕೆ ಬಗ್ಗೆ ತಿಳಿಸಿದರು. ಬಳಿಕ ತಿದ್ದುಪಡಿ ಮಾಡಲಾದ ಸಂಘದ ಕಾಯ್ದೆ ಕಟ್ಟಳೆಗಳನ್ನು ಮಹಾಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ಎರಡನೇ ಭಾಗವಾಗಿ ಸಂಘದ 2022-2025ರ ಅವಧಿಯ ಆಡಳಿತ ಸಮಿತಿಗೆ 16 ಸದಸ್ಯರ ಆಯ್ಕೆಪ್ರಕ್ರಿಯೆ ನಡೆಸಲಾಯಿತು. ಸಂಘದ ವಿಶೇಷ ಆಮಂತ್ರಿತ ಸದಸ್ಯ, ನಿಯೋಜಿತ ಚುನಾವಣಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ ಆಯ್ಕೆಪ್ರಕ್ರಿಯೆ ಪೂರೈಸಿದ್ದು ಸಂಘದ ಸೂಚನೆಯಂತೆ 16 ಅಭ್ಯಥಿರ್üಗಳು ಮಾತ್ರ ನಾಮಪತ್ರಗಳನ್ನು ಸಲ್ಲಿಸಿರುವ ಕಾರಣ ಎಲ್ಲಾ 16 ಅಭ್ಯಥಿರ್üಗಳು ಸರ್ವಾನುಮತದಿಂದ ಆಯ್ಕೆ ಆಗಿರುವುದನ್ನು ಅಧಿಕೃತವಾಗಿ ತಿಳಿಸಿದ್ದು, ಸಿಎ| ಜಗದೀಶ್ ಅನುಪಸ್ಥಿತಿಯಲ್ಲಿ ಸಿಎ ಸಂಸ್ಥೆಯ ಪ್ರಬಂಧಕ ಸಿಎ| ಸೌರಭ್ ಭಟಾವಿಯಾ ಉಪಸ್ಥಿತರಿದ್ದು ಆಯ್ಕೆಯಾದ ಅಭ್ಯಥಿರ್üಗಳ ಯಾದಿ ಪ್ರಕಟಿಸಿದರು.

ಡಾ| ದಿನೇಶ್ ಶೆಟ್ಟಿ ರೆಂಜಾಳ, ರಂಗ ಎಸ್.ಪೂಜಾರಿ, ರವೀಂದ್ರ ಶೆಟ್ಟಿ ತಾಳಿಪಾಡಿ, ನಾಗೇಶ್ ಎಲ್.ಪೂಜಾರಿ ಏಳಿಂಜೆ, ಅನಿತಾ ಪಿ.ಪೂಜಾರಿ ತಾಕೋಡೆ, ಪೀಟರ್ ಫಾವೊಸ್ತಿನ್ ಡಿಸೋಜಾ, ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ಕುಸುಮಾ ಗಣಪ (ಜಿ.ಪಿ ಕುಸುಮಾ), ಡಾ| ಶಿವ ಮೂಡಿಗೆರೆ, ರೋನ್ಸ್ ಬಂಟ್ವಾಳ್, ಸಾ.ದಯಾ (ದಯಾನಂದ್ ಸಾಲ್ಯಾನ್), ಜಯಂತ್ ಕೆ.ಸುವರ್ಣ, ಸವಿತಾ ಸುರೇಶ್ ಶೆಟ್ಟಿ, ದುರ್ಗಪ್ಪ ವೈ.ಕೋಟಿಯವರ್, ಕರುಣಾಕರ್ ವಿ.ಶೆಟ್ಟಿ, ನಾಗರಾಜ್ ಕೆ.ದೇವಾಡಿಗ ಇವರು ಆಯ್ಕೆಯಾಗಿರುವುದನ್ನು ತಿಳಿಸಿದರು.

ಅಶೋಕ ಸುವರ್ಣ ಮಾತನಾಡಿ ಮೇ ಒಂದು ಮಹಾರಾಷ್ಟ್ರ ದಿನಾಚರಣೆಯ ಶುಭಾವಸರದಲ್ಲಿ ಸಂಘದ ಬಾಯ್-ಲಾ ತಿದ್ದುಪಡಿ, 2022-2025ರ ಅವಧಿಯ ಆಡಳಿತ ಸಮಿತಿಯ ಆಯ್ಕೆಪ್ರಕ್ರಿಯೆ ಶುಭ ಸಂದೇಶವಾಗಿದೆ. ಪತ್ರಿಕೆಗಳು ಸಮಾಜದ ಆಸ್ತಿ ಇದ್ದಂತೆ. ಇವುಗಳು ಯಾವುದೇ ತಾರತಮ್ಯವಿಲ್ಲದೆ ಎಲ್ಲರಲ್ಲೂ ಸಮಾನತೆ ಕಾಣುವುದು ಪತ್ರಿಕಾ ಧರ್ಮವಾಗಿದೆ. ಸಂಘದಲ್ಲಿ ನನ್ನ ಗೌರವ ಪ್ರಧಾನ ಕಾರ್ಯದರ್ಶಿತ್ವದಲ್ಲಿ ಸಂಘದ ಕಟ್ಟಳೆಗಳ ತಿದ್ದುಪಡಿಯಾಗಿ ಅಂಗೀಕೃತವಾಗಿರುವುದು ಅಭಿಮಾನವೆಣಿಸುತ್ತಿ ದೆ. ಕೊರೋನಾನದ ಕಷ್ಟಕರ ಕಾಲದಲ್ಲಿ ಸದಸ್ಯರ ಜೊತೆಗಿದ್ದು ಆಥಿರ್üಕ ಸಹಾಯವನ್ನೂ, ಬೆಳ್ತಂಗಡಿ ಭೂಕುಸಿತ, ಪ್ರವಾಹಕ್ಕೊಳಗಾದ ಜನತೆಗೆ ಆಪದ್ಭಂದವರಾಗಿ ಮಾನವೀಯತೆ ಮೆರೆದಿರುವುದೇ ನಮ್ಮ ಸೇವಾ ವೈಖರಿಗೆ ಸಾಕ್ಷಿಯಾಗಿದೆ. ಇಂತಹದ್ದೇ ಸೇವೆ ಇನ್ನೂ ಸಂಘದಿಂದ ಮುಂದುವರಿಯುವಂತಾಗಲಿ ಎಂದರು.

ಸಿಎ| ಸೌರಭ್ ಭಟಾವಿಯಾ, ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ದೇವಾಡಿಗ, ಅನಿತಾ ಪಿ.ಪೂಜಾರಿ, ಜಯಂತ್ ಕೆ.ಸುವರ್ಣ, ಸಲಹಾ ಸಮಿತಿ ಸದಸ್ಯರಾದ ಗ್ರೇಗೋರಿ ಡಿಅಲ್ಮೇಡಾ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ, ಗೋಪಾಲ್ ತ್ರಾಸಿ, ಕರುಣಾಕರ್ ವಿ.ಶೆಟ್ಟಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಸ್ವಾಗತಿಸಿದರು. ಸಿಎ| ಸೌರಭ್ ಭಟಾವಿಯಾ, ಬಾಯ್-ಲಾ ತಿದ್ದುಪಡಿಯ ಪ್ರಧಾನ ಜವಾಬ್ದಾರಿ ವಹಿಸಿದ ಸಾ.ದಯಾ, ತಿದ್ದುಪಡಿಯಲ್ಲಿ ಸಹಕರಿಸಿದ ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಜಗದೀಶ್ ಬಿ.ಶೆಟ್ಟಿ, ಸತೀಶ್ ಎಸ್.ಸಾಲಿಯಾನ್ (ರಜಕ), ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಡಾ| ಆರ್.ಕೆ ಶೆಟ್ಟಿ ಮತ್ತಿತರರ ಸೇವೆಯಲ್ಲಿ ಮನವರಿಸಿ ಅಭಿವಂದಿಸಲಾಯಿತು. ಅಕ್ಕಲಕೋಟೆಯಲ್ಲಿ ನಡೆಯುವ ಸಮ್ಮೇಳನದ ಪ್ರಶಸ್ತಿಕೆ ಭಾಜನರಾದ ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಸಂಘದ ಪೆÇೀಷಕ ಸದಸ್ಯರಾಗಿದ್ದು ಇತ್ತೀಚೆಗೆ ಜನ್ಮದ ಷಷ್ಠ ್ಯಪೂರ್ತಿ ಸಂಭ್ರಮಿಸಿದ ಡಾ| ಶಿವರಾಮ ಕೃಷ್ಣ ಭಂಡಾರಿ, ಶ್ರೀ ಚಿತ್ತಾರಿ ಹಾಸ್ಪಿಟಾಲಿಟಿ ಸರ್ವಿಸಸ್ ಎಲ್‍ಎಲ್‍ಪಿ ಸಂಸ್ಥೆಯ ಆಡಳಿತ ನಿರ್ದೇಶಕ ಸದರಾಮ ಎನ್.ಶೆಟ್ಟಿ ಅವರಿಗೂ ಅಧ್ಯಕ್ಷರು ಪುಷ್ಫಗುಪ್ಚವನ್ನಿತ್ತು ಅಭಿನಂದಿಸಿದರು.

ಸಂಘದ ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ, ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಶ್ಯಾಮ ಎಂ.ಹಂಧೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಶೋಕ ಎಸ್.ಸುವರ್ಣ ಸಭಾ ಕಲಾಪ ನಿರೂಪಿಸಿದರು. ರವೀಂದ್ರ ಶೆಟ್ಟಿ ತಾಳಿಪಾಡಿ ವಂದಿಸಿದರು.

 

LEAVE A REPLY

Please enter your comment!
Please enter your name here