ಕೆ. ಟಿ. ವಿ ಪತ್ರಿಕೋದ್ಯಮದ ಘನತೆಯನ್ನು ಪ್ರತಿಷ್ಠಿತವಾಗಿರಿಸಿದ ಅಗ್ರಗಣ್ಯ ಪತ್ರಕರ್ತ : ಪಾಲೆತ್ತಾಡಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಜೇಷ್ಠ ಸೇವೆಗೈದು ಇತ್ತೀಚೆಗೆ ಪುಣೆಯಲ್ಲಿ ಸ್ವರ್ಗಸ್ಥರಾದ ಹಿರಿಯ ಪತ್ರಕರ್ತ, ಕಥೆಗಾರ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿಯ ಕಾರ್ಯಧ್ಯಕ್ಷ ಕೆ.ಟಿ ವೇಣುಗೋಪಾಲ್ ಇವರಿಗಾಗಿ ಶೋಕಸಭೆಯನ್ನು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ರಿ.) ಹಾಗೂ ಕರ್ನಾಟಕ ಸಂಘ ಮುಂಬಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಶನಿವಾರ ಸಂಜೆ ಉಪನಗರ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘದ ಡಾ| ವಿಶ್ವೇಶ್ವರಯ್ಯ ಸಭಾಗೃಹದ ಸಮರಸ ಭವನದಲ್ಲಿ ಏರ್ಪಾಡಿಸಿತ್ತು.

ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕರೂ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌ| ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ಮನೋಹರ್ ಎಂ.ಕೋರಿ, ಉಪಾಧ್ಯಕ್ಷ ಭರತ್ ಕುಮಾರ್ ಪೊಲಿಪು, ಗೌ| ಪ್ರಧಾನ ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್ ವೇದಿಕೆಯಲ್ಲಿ ಆಸೀನರಾಗಿದ್ದು ಅಗಲಿದ ಚೇತನದ ಭಾವಚಿತ್ರಕ್ಕೆ ಪುಷ್ಫಾಂಜಲಿಗೈದು ನುಡಿನಮನ ಸಲ್ಲಿಸಿದರು.

ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ “ ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಒಂಟಿ ಚಿಂತನೆಯ ವ್ಯಕ್ತಿತ್ವದ ಕೆ ಟಿ ವೇಣುಗೋಪಾಲರ ಸೇವೆ ಅನನ್ಯವಾಗಿದ್ದು, ಜನಪರ ಕಾಳಜಿವುಳ್ಳ ಕೆಟಿವಿ ಕನ್ನಡಿಗರಿಗೆ ಹತ್ತಿರವಿದ್ದೂ ದೂರವೇ ಉಳಿದರು. ಸೂಕ್ಷ್ಮತೆಯ ದೃಷ್ಠಿಕೋನವುಳ್ಳ ಇವರು ನಿಷ್ಠುರತೆಯೊಂದಿಗೆ ಪತ್ರಿಕೋದ್ಯಮದ ಘನತೆಯನ್ನೇ ಪ್ರತಿಷ್ಠಿತವಾಗಿರಿಸಿದ ಅಗ್ರಗಣ್ಯ ಪತ್ರಕರ್ತರಾಗಿದ್ದರು” ಎಂದರು

ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾ ಸಾಗರ್ ಚೌಟ, ಕೋಶಾಧಿಕಾರಿ ಜಿ.ಪಿ.ಕುಸುಮ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವ ಬಿಲ್ಲವ, ಈಶ್ವರ್ ಅಲೆವೂರು, ಹೇಮ್‍ರಾಜ್ ಕರ್ಕೇರಾ, ಸಲಹೆಗಾರ ಮಂಡಳಿ ಸದಸ್ಯರಾದ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ. ಸಂಬಂಧ ಮಾಸಿಕದ ಸಂಪಾದಕ ಶ್ರೀನಿವಾಸ್ ಜೋಕಟ್ಟೆ, ಮೋಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ, ಅಕ್ಷಯ ಮಾಸಿಕದ ಸಹ ಸಂಪಾದಕ ಹರೀಶ್ ಕೆ. ಹೆಜ್ಮಾಡಿ, ತೀಯಾಜ್ಯೋತಿ ಮಾಸಿಕದ ಸಂಪಾದಕ ಈಶ್ವರ್ ಐಲ್, ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ ಶೆಟ್ಟಿ, ಜವಾವ್ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಸಿ ಶೆಟ್ಟಿ, ದೇವಾಡಿಗ ಸಂಘ ಮುಂಬಯಿ ಇದರ ಹಿರಿಯಡ್ಕ ಮೋಹನ್‍ದಾಸ್, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಗೌ| ಪ್ರಧಾನ ಕಾರ್ಯದರ್ಶಿ ನಿತ್ಯಾನಂದ್ ಡಿ.ಕೋಟ್ಯಾನ್, ಸಂಜೀವ ಪೂಜಾರಿ ತೋನ್ಸೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಯು.ಮಾಡಾ, ಬಿಜೆಪಿ ಮುಂದಾಳು ಎಲ್.ವಿ.ಅವಿೂನ್, ಬಿ.ಎಸ್.ಕೆ.ಬಿ ಎಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಗೋರೆಗಾಂ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಆರ್.ಎಸ್.ದೇವಾಡಿಗ, ಮೈಸೂರು ಎಸೋಸಿಯೇಶನ್‍ನ ಡಾ| ಬಿ. ಆರ್. ಮಂಜುನಾಥ್ ಹಾಗೂ ಕೆ.ಮಂಜುನಾಥಯ್ಯ, ಪ್ರೆಸ್ ಕ್ಲಬ್ ಜಯ ಪೂಜಾರಿ, ಕನ್ನಡ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಸಾಹಿತಿ ಡಾ| ವ್ಯಾಸರಾಯ ಬಳ್ಳಾಲ್, ಎಸ್.ಟಿ.ವಿಜಯ್‍ಕುಮಾರ್ ತಿಂಗಳಾಯ, ವಿಶ್ವನಾಥ್ ಪೇತ್ರಿ, ವಸಂತ್, ಮೋಹನ್ ಮಾರ್ನಾಡ್, ಶ್ರೀಮತಿ ಅನುಷಾ ಶೆಟ್ಟಿ, ಕಮಲಾಕ್ಷ ಸರಾಫ್, ಕವಿ ಬಿ.ಎಸ್ ಕುರ್ಕಾಲ್, ಶಿಮುಂಜೆ ಪರಾರಿ, ಸುರೇಂದ್ರ ಕುಮಾರ್ ಮಾರ್ನಾಡ್, ಉದಯವಾಣಿ ಪತ್ರಿಕೆಯ ಸಾ.ದಯ (ದಯಾನಂದ ಸಾಲ್ಯಾನ್), ಶ್ರೀಮತಿ ಶ್ಯಾಮಲಾ ಮಾಧವ್, ಶ್ರೀಮತಿ ವಿಮಲಾ ಭಟ್, ಹ್ಯಾರಿ ಆರ್. ಸಿಕ್ವೇರಾ, ಸಂಜಯ್ ಬೋಳಾರ್, ಭಾಸ್ಕರ್ ಸರಪಾಡಿ, ಕಮಲಾಕ್ಷ ಸರಾಫ್ ಮುಂತಾದ ಗಣ್ಯರು ಹಾಜರಿದ್ದು ಸಂತಾಪ ವ್ಯಕ್ತ ಪಡಿಸಿ, ಪುಷ್ಫನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here