ಮರಾಠಿ-ಕನ್ನಡ ಭಾಷಾ ಬಾಂಧವ್ಯ ಬೆಳೆಯಲಿ : ಸುನೀಲ್ ಪಾಡ್ತೆ

ಮುಂಬಯಿ, ಎ.21:(ದಿ| ಎಂ.ವಿ ಕಾಮತ್ ವೇದಿಕೆ): ಕನ್ನಡಿಗರು ಸಹೃದಯಿಗಳಾಗಿದ್ದು ಕರ್ಮಭೂಮಿಯನ್ನು ಜನ್ಮಭೂಮಿಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿರುವುದು ಅಭಿನಂದನೀಯ. ಮರಾಠಿಗರಲ್ಲಿ ಸಹೋದರತ್ವ ಭಾವನೆಯನ್ನಿರಿಸಿರುವ ಬಾಳುವ ಕನ್ನಡಿಗರು ನಮಗೂ ಅತ್ಮೀಯರು.ಇಷ್ಟೋಂದು ಸಂಖ್ಯೆಯ ಪತ್ರಕರ್ತರನ್ನು ಒಗ್ಗೂಡಿಸಿ ಪ್ರವಾಸಿ ತಾಣವಾದ ಎಲೆಫಂಟಾ ಗುಹೆಯಲ್ಲಿ ಸಂವಾದವನ್ನು ಹಮ್ಮಿಕೊಂಡು ಮರಾಠಿ-ಕನ್ನಡ ಭಾಷಾ ಬಾಂಧವ್ಯಕ್ಕೆ ಶ್ರಮಿಸುವ ನಿಮ್ಮ ಉದ್ದೇಶ ಸೌಹಾರ್ದಯುತವಾಗಿ ಈಡೇರಲಿ ಎಂದು ಮಹಾರಾಷ್ಟ್ರ ರಾಜ್ಯದ ಘಾರಾಪುರಿ ಗ್ರಾಮ ಪಂಚಯತ್‍ನ ಸರ್‍ಪಂಚ್ ಸುನೀಲ್ ಹರಿಶ್ಚಂದ್ರ ಪಾಡ್ತೆ ತಿಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಸಹಯೋಗದೊಂದಿಗೆ ಘಾರಾಪುರಿ ಗ್ರಾಮ ಪಂಚಯತ್‍ನ ಮುಂಬಯಿ ದ್ವೀಪನಗರಿ ಎಲೆಫಂಟಾ ಕೇವ್ಸ್‍ನಲ್ಲಿ ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶದ ಮೂರನೇ ಮಹಾ`ಸಂವಾದ’ ಉದ್ಘಾಟಿಸಿ ಸುನೀಲ್ ಪಾಡ್ತೆ ಮಾತನಾಡಿದರು.

ಈ ಸಂದರ್ಭದಲ್ಲಿ ರಿಪೆರ್ಟರ್ಸ್ ಗೀಲ್ಡ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರ್, ಕನ್ನಡ ಸಾಮಾಜಿಕ ಸಂಸ್ಥೆ ಉರಾಣ್ ಇದರ ಗೌರವಾಧ್ಯಕ್ಷ ಅಶೋಕ್ ಎಂ.ಶೆಟ್ಟಿ, ಅಧ್ಯಕ್ಷ ಸುಧಾಕರ್ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಸದಾಶಿವ ಕೆ.ಪೂಜಾರಿ ಅತಿಥಿಗಳಾಗಿ ಉಪಸ್ಥಿತರಿದ್ದು ಸಮ್ಮೇಳನಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅತಿಥಿಗಳನ್ನು ಸ್ಮರಣಿಕೆ, ಪ್ರಮಾಣಪತ್ರವನ್ನಿತ್ತು ಗೌರವಿಸಿದರು.

ಪತ್ರಿಕೋದ್ಯಮ-ಓದುಗರು ಮತ್ತು ಸ0ಘಟನೆಗಳು ವಿಷಯದಲ್ಲಿ ಜರ್ನಲಿಸಂ ಇನ್‍ಸ್ಟಿಟ್ಯೂಟ್, ರಾಯಚೂರು ಕರ್ನಾಟಕ ಇದರ ಉಪನ್ಯಾಸಕ ಪ್ರೊ| ಕೆ.ಚನ್ನಬಸವಪ್ಪ ಅವರ ಅಧ್ಯಾಕ್ಷತೆಯಲ್ಲಿ ನಡೆಸಲ್ಪಟ್ಟ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಹೆಸರಾಂತ ಲೇಖಕ, ವಾಗ್ಮಿ ರವಿ ರಾ.ಅಂಚನ್ ಉಪಸ್ಥಿತರಿದ್ದರು. ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ ಡಾ| ಭರತ್‍ಕುಮಾರ್ ಪೊಲಿಪು ಆಶಯ ನುಡಿಗಳನ್ನಾಡಿದರು. ಮಂಗಳೂರು ಪತ್ರಿಕಾ ಭವನ ಟ್ರಸ್ಟ್
ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಕರ್ತ ಲಕ್ಷ್ಮೀ ಮಚ್ಚಿನ ಬೆಳ್ತಂಗಡಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಜನಾರ್ಧನ ಎಸ್.ಪುರಿಯ ಸಮನ್ವಯಕರಾಗಿ ಸಂವಾದ ನಿರ್ವಹಿಸಿದರು. ರೋನ್ಸ್ ಬಂಟ್ವಾಳ್ ವಂದಿಸಿದರು.

ಆ ಮುನ್ನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ಗೇಟ್‍ವೇ ಆಫ್ ಇಂಡಿಯಾ ಭೇಟಿ ನೀಡಿತು. ಅಲ್ಲಿ ಫಲ್ಕೋನ್ ಆಫ್‍ಶೋರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಕೊನಾಲ್ಡ್ ಬ್ಯಾಪ್ಠಿಸ್ಟ್ ಅವರು `ಪತ್ರಕರ್ತರ ಪಯಣ-ಮಿಲನ’ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು. ಈ ಸಂದರ್ಭದಲ್ಲಿ ಸುಜಾತಾ ಲಂಚ್‍ಹೋಮ್, ಕೊಲಬಾ ಇದರ ಮಾಲಕ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಮತ್ತು ವಿೂಡಿಯಾ ಸ್ಪೋರ್ಟ್ಸ್ ಅಕಾಡೆಮಿ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಕೆಲ್ವಿನ್ ಜೋಶ್ವಾ ಉಡುಪಿ ಉಪಸ್ಥಿತರಿದ್ದು, ಕೆ.ವಿ ಪ್ರಭಾಕರ್ ಅವರು ಅತಿಥಿಗಳನ್ನು ಸ್ಮರಣಿಕೆ, ಪ್ರಮಾಣಪತ್ರವನ್ನಿತ್ತು ಗೌರವಿಸಿದರು.

LEAVE A REPLY

Please enter your comment!
Please enter your name here