(ಚಿತ್ರ / ವರದಿ : ರೋನ್ಸ್ ಬಂಟ್ವಾಳ್):
ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಗಳು ಜಂಟಿ ಆಶ್ರಯದಲ್ಲಿ ಇಂದಿಲ್ಲಿ (25.09.09) ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವ ಕಲೀನಾ ಕ್ಯಾಂಪಸ್‍ನ ರಾಸಾಯನ ಶಾಸ್ತ್ರ ವಿಭಾಗದ ಸಭಾಗೃಹದಲ್ಲಿ ಸಾಹಿತ್ಯ ಮತ್ತು ಪತ್ರಿಕೊದ್ಯಮ ಬಾಂಧವ್ಯ ವಿಷಯದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಿತು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಕವಿ, ಸಾಹಿತಿ, ಖ್ಯಾತ ಶಿಕ್ಷಕ ಬಿ.ಎಸ್ ಕುರ್ಕಾಲ್ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಮತ್ತು ಪತ್ರಿಕೊದ್ಯಮ ಬಾಂಧವ್ಯ ವಿಷಯದಲ್ಲಿ ಕವಿ, ಸಾಹಿತಿ ಹಾಗೂ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾಹಿತಿಯನ್ನಿತ್ತರು.

ಪತ್ರಕರ್ತ ಜೋಕಟ್ಟೆ ಮಾತನಾಡಿ ವೈಯುಕ್ತಿಕ ಸಾಮಥ್ರ್ಯ ಲೇಖಕನ ಆಸ್ತಿ ಆಗಿದೆ. ಆದುದರಿಂದ ಲೇಖನಗಳು ವಿಶ್ವಾಸಮಯವಾಗಿರಬೇಕು. ವರದಿ ಲೇಖನಗಳಲ್ಲಿ ಯವುದೇ ಸಂದರ್ಭಕ್ಕೂ ಪುನರಾವರ್ತನೆಯನ್ನು ಕಾಯ್ದಿರಿಸಬೇಕು. ಲೇಖಕ ಒಳ್ಳೆಯ ಲೇಖನಗಳನ್ನು ಓದಿ ಜ್ಞಾನವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದ್ದು, ಓದು ಲೇಖಕನಿಗೆ ಸಾಮಥ್ರ್ಯವನ್ನೀಡ ಬಲ್ಲದು. ಪ್ರಸ್ತುತ ಪತ್ರಿಕೋದ್ಯಮಕ್ಕೆ ಉದ್ಯಮದ ಸ್ವಾತಂತ್ರ್ಯ ಹಾಗೂ ಮಾನ್ಯತೆ ದೊರೆತಿದೆ ಆದುದರಿಂದ ಸ್ವಾತಂತ್ರ ಪತ್ರಕರ್ತರಿಗೆ ಮಡಿಮಂತಿಕೆ ಇರಬಾರದು ಎಂದರು.

ಬಿ.ಎಸ್ ಕುರ್ಕಾಲ್ ಮಾತನಾಡಿ ಅತಿಯಾದ ಸನ್ಮಾನಗಳು ವ್ಯಕ್ತಿಯ ಪರ್ತಿಷ್ಠೆಗೆ ಧಕ್ಕೆ ತರುವಂತಾಗಿದ್ದು, ಸನ್ಮಾನಗಳು ವ್ಯಕ್ತಿಯ ಗೌರವವನ್ನು ಕೆಳಮಟ್ಟಿಗೆ ತಂದಿರಿಸಿವೆ. ಸಾಹಿತ್ಯ-ಲೇಖನಗಳ ಅಬಿವೃದ್ಧಿಗೆ ನವ ಲೇಖಕರಿಗೆ ಅವಕಾಶಗಳನ್ನೀಡಿ ಪೆÇ್ರೀತ್ಸಾಹಿಸುವುದು ಅವಶ್ಯವಾಗಿದೆ. ಯೋಗ್ಯತೆವುಳ್ಳವರಿಗೆ ಅವಕಾಶ ಕಲ್ಪಿಸಿ. ಮಾತೃಹೃದಯ ಪತ್ರಿಕಾ ಸಂಪಾದಕರಿಗೆ ಇರಬೇಕು ಎಂದು ತಿಳಿಸುತ್ತಾ ಕ್ರಿಯಾಶಕ್ತಿಯನ್ನು ಹೇಗೆ ಉದ್ದೀಪಣ ಗೊಳಿಸಬಹುದೆಂಬ ಅನುಭವ ತಿಳಿಸಿದರು.

ಮಂಬಯಿ ನಗರದಲ್ಲಿ ಯಾವುದನ್ನೂ ಕಲಿಯಬಹುದು. ಆದುದರಿಂದ ವಿಧ್ಯಾಭ್ಯಾಸದ ಮೂಲಕ ಅಧ್ಯಾಯನವಾಗಲಿ ಹೊರತು ಸ್ಪರ್ಧೆ ಅಲ್ಲ. ಮಾಹಿತಿಯುಗದಲ್ಲಿ ಸಾಧನೀಯವಾಗಿ ಮುನ್ನಡೆಯುತ್ತಿರುವ ಈ ಯುಗದಲ್ಲಿ ಸಮೂಹ ಮಾಧ್ಯಮಗಳ ಯುಗವೂ ಆಗಿದೆ. ಪತ್ರಿಕೋದ್ಯಮವು ಒಳ್ಳೆಯ ಬೆಳವಣಿಗೆ ಕಾಣುತ್ತಿದ್ದು, ವಿಮರ್ಶೆಗಳು ಹಾಗೂ ಲೇಖನಗಳು ಪತ್ರಿಕೆಗಳ ಮೂಲಕವೇ ಸಂಪೂರ್ಣ ಸಾಹಿತ್ಯ ಕಂಡಿದೆ. ಪತ್ರಿಕೆ ಮತ್ತು ಸಾಹಿತ್ಯ ಬೇರೆ ಬೇರೆ ಅಲ್ಲ ಅವುಗಳು ಒಂದೇ ನಾಣ್ಯದ ಎಅರಡು ಮುಖಗಳು ಅಷ್ಟೇ. ಪತ್ರಕರ್ತನಿಗೆ ಸಾಹಿತ್ಯದ ವಿಚಾರ ತಿಳಿದಿರಬೇಕು. ಪತ್ರಕರ್ತರು ತಮ್ಮತನವನ್ನು ಮೊದಲಾಗಿ ಗುರುತಿಸಿಕೊಳ್ಳಬೇಕು. ಮಾತು, ಕೃತಿ ಜೊತೆ ಜೊತೆಗೆ ಸಾಗಿದಾಗ ಮಾತ್ರ ಉತ್ತಮ ಪತ್ರಕರ್ತರಾಗಬಹುದು. ಎಂದು ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷ ಭಾಷಣವನ್ನುದ್ದೇಶಿಸಿ ನುಡಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಇದರ 2008ನೇ ಸಾಲಿನ ಪ್ರತಿಷ್ಠಿತ ಬಿ. ಶಾಂತಿಲಾಲ್ ದತ್ತಿನಿದಿ ಪ್ರಶಸ್ತಿಯನ್ನು ಪಡೆದ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಇವರನ್ನು ವಿಭಾಗದ ಎಂ.ಎ., ಎಂ.ಫಿಲ್ ಹಾಗೂ ಪಿಎಚ್‍ಡಿ ವಿದ್ಯಾರ್ಥಿಗಳು ಜೊತೆಗೂಡಿ ಸನ್ಮಾನಿಸಲಾಯಿತು.

ಅಕ್ಷಯ ಪತ್ರಿಕೆಯ ಉಪ ಸಂಪಾದಕ ಈಶ್ವರ್ ಅಲೆವೂರು ಕಾರ್ಯಕ್ರಮ ನಿರೂಪಿಸಿದರು. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here