ಮುಂಬಯಿ, ಜ.26: ಕನಸು ಯಾರ ಸೊತ್ತು ಅಲ್ಲ, ಚಿಕ್ಕವರು-ದೊಡ್ಡವರು, ಇರುವವರು-ಇಲ್ಲದವರು ಎಲ್ಲರೂ ದೊಡ್ಡ ಕನಸು ಕಾಣಬಹುದು. ಆದರೆ ಮುಖ್ಯವಾಗುವುದು ಕಂಡ ಕನಸಿನ ಬೆನ್ನತ್ತುವುದು, ಅದಕ್ಕೆ ಬೇಕಾದ ಕಠಿಣ ದುಡಿಮೆ ಮತ್ತು ಪರಿಶ್ರಮದ ತೈಲ ಎರೆಯುವುದು. ಇಷ್ಟಾದಲ್ಲಿ ದೇವರ ನೆರವು ದೊರೆತು ಕಂಡ ಕನಸು ನನಸಾಗುವಲ್ಲಿ ಯಾವ ಸಂಶಯವು ಇಲ್ಲ ಇದಕ್ಕೆ ನಾನೇ ಒಂದು ಉದಾಹರಣೆ. ಹೀಗೆಂದವರು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ-ಆಡಳಿತ ನಿರ್ದೇಶಕಿ ಅಚ್ಚ ತುಳು ಕನ್ನಡದ ಮಹಾನ್ ಸಾಧಕಿ ಮೇಡಂ ಗ್ರೇಸ್ ಪಿಂಟೊ.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಪ್ರಾಯೋಜಕತ್ವದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ-ಪ್ರತಿನಿಧಿಗಳ ಮಹಾ`ಸಹಮಿಲನ’ದ ಎರಡನೇ ಹಂತದ ಪತ್ರಕರ್ತರ ಸಂಘಟನೆಗಳ ಕಾರ್ಯಗಾರ ಮತ್ತು ವಿದ್ಯಾಥಿರ್ ಪ್ರತಿಭಾ ವಿನಿಮಯ ಕಾರ್ಯಕ್ರಮವು ಕಳೆದ ಗುರುವಾರ ಅಪರಾಹ್ನ ಮಲಾಡ್ ಪಶ್ಚಿಮದಲ್ಲಿನ ರಾಯನ್ ಇಂಟರ್‍ನ್ಯಾಷನಲ್ ಶಾಲೆಯ ರಾಯನ್ ಟಿವಿ ಸ್ಟೂಡಿಯೋದಲ್ಲಿ ನಡೆಸಲಾಗಿದ್ದು ರಾಷ್ಟ್ರೀಯ ಮಟ್ಟದ ಪತ್ರಕರ್ತರ ಒಕ್ಕೂಟ-ಪ್ರತಿನಿಧಿಗಳ ಸಂವಾದ ಕಾರ್ಯಕ್ರಮಕ್ಕಾಗಿ ಮುಂಬಯಿಗೆ ಆಗಮಿಸಿದ್ದ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ಮಂಗಳೂರು ಗ್ರಾಮಂತರ ಪ್ರದೇಶದ ಬಜಪೆಯ ಅತಿ ಪುಟ್ಟ ಹಳ್ಳಿಯಿಂದ ಬಂದ ನಾನು ವೈದ್ಯೆಯಾಗಬೇಕೆಂಬುದು ನನ್ನಪ್ಪನ ಇಚ್ಛೆಯಾಗಿತ್ತು. ಆದರೆ ಶಾಲಾ ದಿನಗಳಲ್ಲಿ ದೊರೆತ ಶಿಸ್ತು ನಿಷ್ಠೆಯ ಶಿಕ್ಷಕರ ಗರಡಿಯಲ್ಲಿ ಪಳಾಗಿದ ನಾನು ಕಠಿಣ ದುಡಿಮೆ ಮತ್ತು ಗೆಲ್ಲುವ ಛಲವನ್ನು ಮೈಗೂಡಿಸಿಕೊಂಡೆ. ಜೊತೆಗೆ ನಾನೊಬ್ಬ ಅಧ್ಯಾಪಕಿಯಾಗಬೇಕೆಂಬ ಕನಸು ಇದೇ ಹಂತದಲ್ಲಿ ಮೊಳೆಯಿತು. ಮದುವೆಯಾಗಿ ಮುಂಬಯಿ ಸೇರಿದ ಬಳಿಕವೂ ಮಕ್ಕಳಿಗೆ ಬೋಧಿಸುವ ಆಸಕ್ತಿ-ಕಾರ್ಯ ಮುಂದುವರಿಯಿತು. ಮುಂದೆ ಇದುವೇ ನಾವು ರಾಯನ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ನಾಂದಿಯಾಯಿತು ಎಂದು ಮೇಡಂ ಪಿಂಟೊ ವಿವರಿಸಿದರು.

ಜೀವನ ಬಹು ಅಮೂಲ್ಯ. ಆದರೆ ಅದನ್ನು ಅರ್ಥ ಪೂರ್ಣಗೊಳಿಸುವುದು ನಮ್ಮ ಕೈಯಲ್ಲಿದೆ. ಸ್ವಷ್ಟವಾದ ಉದ್ದೇಶ ಮತ್ತು ಗುರಿಯೊಂದನ್ನು ಆರಿಸಿಕೊಂಡು ಆ ನಿಟ್ಟಿನಲ್ಲಿ ಆಡಿಯಿಡಬೇಕು. ಆಯಾ ಯೋಜನೆಗೆ ಸಂಬಂಧಿಸಿ ನಿರಂತರ ಹೊಸತನ್ನು ಯೋಚಿಸಬೇಕು ಮತ್ತು ಪರಿಚಯಿಸಬೇಕು. ಇದೇ ನಾನು ನಡೆಸಿದ ಪ್ರಯೋಗ-ಪರಿಣಾಮ ಈ ಮಟ್ಟದಲ್ಲಿ ರಾಯನ್ ಸಮೂಹ ಬೆಳೆಯಲು ಸಾಧ್ಯವಾಯಿತು. ಪತ್ರಕರ್ತರು ರಾಷ್ಟ್ರದ ಬಲಿಷ್ಠ ಸಂಪತ್ತು ಅದರಲ್ಲೂ ಗ್ರಾಮೀಣ ಪತ್ರಕರ್ತರು ಮತ್ತಷ್ಟು ಹೊಣೆಗಾರಿಯುಳ್ಳವರಾಗಿದ್ದಾರೆ. ಉದ್ಯಮಿಗಳಿಂದ ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನರು ಪತ್ರಕರ್ತರನ್ನು ಬಳಸಿ ಲಾಭ ಪಡೆಯುತ್ತಾರೆ. ಆದರೆ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದು ತೀರಾ ಕಡಿಮೆ. ಇದನ್ನು ಗಮನಿಸಿ ಗ್ರಾಮೀಣ ಪ್ರದೇಶದವಳಾದ ನಾನು ಕೇವಲ ನಿಮ್ಮನ್ನುಪ್ರೋತ್ಸಹ ಹಿಸುತ್ತಿದ್ದೇನೆ ಎಂದರು.

ಕಪಸಮ ಸಂಸ್ಥೆಯು ಊರಿನಿಂದಲೇ ವಿಶೇಷವಾಗಿ ತರಿಸಲಾಗಿದ್ದ ಗೆಂದಾಳೆ ಎಳನೀರಿನ ಗೊನೆ, ಪಚ್ಚೆ ಎಳನೀರಿನ ಗೊನೆ, ಕದಲಿ ಬಾಳೆಗೊನೆ, ತಾಳೆಹಣ್ಣಿನ ಗೊನೆ, (ತುಳುವಿನ ಇರೋಳು), ತೆಂಗಿನ ಫಲ ಮತ್ತು ತರಕಾರಿ ಹಸಿರುವಾಣಿಯನ್ನೊಳಗೊಂಡ ಬೃಹತ್‍ಬುಟ್ಟಿಯನ್ನು ಸಂಘದ ವಿಶೇಷ ಡೈರೆಕ್ಟರಿಯನ್ನೀಡಿ ರಾಯನ್ ಸಂಸ್ಥೆಯ ಆಡಳಿತ ನಿರ್ದೇಶಕಿ ಗ್ರೇಸ್ ಪಿಂಟೊ ಅವರನ್ನು ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.

ಪತ್ರಕರ್ತರು ತಮಗೆ ನೀಡಿದ ಸತ್ಕಾರದ ತುಳುನಾಡ ವಸ್ತುಗಳಿಗೆ ಮಾರುಹೋದ ಗ್ರೇಸ್, ಎಷ್ಟೇ ಬೆಳೆದರೂ ನಾನಿನ್ನೂ ಬಜಪೆಯ ಹೆಣ್ಣು ಮಗಳೇ, ಬಾಲ್ಯದಲ್ಲಿ ನಾನು ತಾಳೆಮರದ ಎಳೆಹಣ್ಣುಗಳಿಗಾಗಿ ಸವಿಯಲು ಕಾತರಿಸುತ್ತಿದ್ದೆ. ಇಂದು ನನಗಿಷ್ಟವಾದ ಈ ವಸ್ತುಗಳನ್ನು ನೀಡುವ ಮೂಲಕ ನಿವೆಲ್ಲರೂ ನನ್ನ ಹೃದಯಕ್ಕೆ ಲಗ್ಗೆಯಿಟ್ಟು ಕಳೆದ ನನ್ನ ಬಾಲ್ಯವನ್ನು ನನಗೆ ನೆನಪಿಸಿ ಕೊಟ್ಟಿದ್ದೀರಿ ಎಂದರು.

ಸಂವಾದದಲ್ಲಿ ಭಾಗವಹಿಸಿದ ಎಲ್ಲಾ ಪತ್ರಕರ್ತರು ಮತ್ತು ಅವರ ಕುಟುಂಬದ ಜತೆ ಅತ್ಮೀಯವಾಗಿ ಬೆರೆತ ಗ್ರೇಸ್ ಪ್ರೀತಿಯನ್ನು ಹಂಚಿಕೊಂಡರು. ಬದುಕು ಎಲ್ಲರಿಗೂ ಅವಕಾಶಗಳನ್ನು ಕೊಟ್ಟೇ ಕೊಡುತ್ತದೆ. ಒತ್ತಡದ ವೃತ್ತಿಯಾದ ಪತ್ರಿಕೋದ್ಯಮವನ್ನು ನಡೆಸುವ ನಿಮ್ಮ ಬದುಕೂ ಹಸನಾಗಲಿ ಎಂದು ಪತ್ರಕರ್ತರಿಗೆ ಶುಭಹಾರೈಸಿದರು. ಗ್ರೇಸ್ ಅವರ ಜೊತೆ ರಾಯನ್ ಸ್ಕೂಲ್‍ನ ವಿದ್ಯಾಥಿರ್ ಪರಿವಾರ ಪತ್ರಕರ್ತರಿಗೆ ಸಂಸ್ಥೆಯ ಬಗ್ಗೆ ಎಲ್ಲಾ ವಿವರಗಳನ್ನು ನೀಡಿ ವಿಶೇಷ ಸಹಕಾರ ನೀಡಿದರು.

ಶಶಿಧರ್ ಪೆಯತ್ತಬೈಲು ಮಾತನಾಡಿ ರಾಯನ್ ಸಂಸ್ಥೆ ಭೇಟಿ ನೀಡುವ ಮೂಲಕ ನಾವು ನಮ್ಮ ಅರಿವುವನ್ನು ಹೆಚ್ಚಿಸಿಕೊಂಡೆವು. ನಮ್ಮ ಕ್ಷ್ಷೇತ್ರದಲ್ಲಿಯೂ ನಿಮಗಿರುವ ಆಸಕ್ತಿಯನ್ನು ಕಂಡು ಬೆರಗಾಗಿದ್ದೇವೆ. ಅತೀ ಶೀಘ್ರವೇ ರಾಯನ್ ಟಿವಿ ಸ್ಟೂಡಿಯೋ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ರಾಯನ್ ಶಿಕ್ಷಣ ಸಂಸ್ಥೆ ನಿಮ್ಮ ತವರೂರ ಜನತೆಗೆ ಲಭಿಸುವಂತಾಗಲಿ ಆ ನಿಟ್ಟಿನಲ್ಲಿ ನೀವು ಮನ ಮಾಡಬೇಕು ಎಂದು ವಿನಂತಿಸಿದರು.

ಇವತ್ತಿನ ಮಕ್ಕಳನ್ನು ನಾಳಿನ ತಂತ್ರಜ್ಞಾನಕ್ಕೆ ನೀವು ಅಣಿಗೊಳಿಸುತ್ತಿದ್ದೀರಿ ಇದು ನಿಜಕ್ಕೂ ಸ್ತುತ್ಯರ್ಹ ಕಾರ್ಯ ಎಂದು ಪಿ.ಬಿ ಹರೀಶ್ ರೈ ತಿಳಿಸಿದರು.

ಶ್ರೀನಿವಾಸ್ ನಾಯಕ್ ಮಾತನಾಡಿ ಮುಂಬಯಿ ಭೇಟಿ ಖುಷಿ ನೀಡಿತು. ಮುಂಬಯಿ ನಾವು ನಿಮ್ಮ ಬಗ್ಗೆ ಬಹಳಷ್ಟು ತಿಳಿದಿದ್ದರೂ ಆಗಾಧವಾದ ನಿಮ್ಮ ಇಷ್ಟೊಂದು ಕಾರ್ಯವ್ಯಾಪ್ತಿಯ ¨ಗ್ಗೆ ಈಗ ತಿಳಿದು ನಿಮ್ಮ ಬಗೆಗಿನ ಗೌರವ ಇಮ್ಮಡಿಯಾಯಿತು ಎಂದರು.

ನಿಮಗೆ ಇಂತಹ ಸಾಧನೆ ಇಗೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸುವ ಮೂಲಕ ತಮ್ಮ ಅಂತರಂಗದ ಮಾತುಗಳನ್ನು ಬಿಚ್ಚಿಡುವಂತೆ ಹರೀಶ್ ಬಂಟ್ವಾಳ ಕೇಳಿಕೊಂಡ ಮೇರೆಗೆ ತನ್ನ ಸಾಧನೆಯ ಹಾದಿಯನ್ನು ಮೇಡಂ ತಿಳಿಸಿದರು.

ದಯಾ ಸಾಗರ್ ಚೌಟ ಮಾತನಾಡಿ ಇಷ್ಟೇಲ್ಲಾ ಶಿಕ್ಪಣ ಪ್ರೇಮ, ತಂತ್ರಜ್ಞಾನ, ರಾಯನ್ ಸಮೂಹ ಸಂಸ್ಥೆ ಸ್ಥಾಪನೆ ಇದೆಲ್ಲವನ್ನು ತಿಳಿದಿದ್ದ ನಮಗೆ ಗ್ರೇಸ್ ಪಿಂಟೊ ಎನ್ನುವ ನಿಮ್ಮೊಳಗೆ ಇರುವ ಆಗಾಢವಾದ ತಾಯ್ತನ, ಬಳಿ ಬಂದವರನ್ನೆಲ್ಲ ಪ್ರೀತಿಸುವ ದಯಾಗುಣ ಮಕ್ಕಳನ್ನು ಅವರು ಹೇಗೇ ಇರಲಿ ಎಂಥಹ ಸ್ಥಿತಿಯಲ್ಲೋ ಇರಲಿ ಒಪ್ಪಿಕೊಂಡು ಅಪ್ಪಿಕೊಳ್ಳುವ ಮಮತೆ ಇವೆಲ್ಲವನ್ನು ಕಂಡು ನಿಜಕ್ಕೂ ಅಚ್ಚರಿಯಾಗಿದೆ. 30 ವರ್ಷಗಳ ಹಿಂದೆ ನಾವು ನಮ್ಮ ಬಾಲ್ಯವನ್ನು ಇಂತಹ ಯಾವುದೇ ಸೌಲಭ್ಯಗಳಿಲ್ಲದೆ ಕಳೆದೆವು. ಹಾಗೇ ನೋಡಿದರೆ ಈಗ ಹುಟ್ಟಿ ನಿಮ್ಮ ಸಂಸ್ಥೆಗೆ ಸೇರಿ ಇಷ್ಟೆಲ್ಲಾ ಸೌಲಭ್ಯಗಳೊಡನೆ ಶಿಕ್ಷಣ ಪೂರೈಸುವ ಬಯಕೆಯಾಗುತ್ತಿದೆ ರಾಯನ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿತ ಮಕ್ಕಳೆಲ್ಲರೂ ನಿಜಕ್ಕೂ ಅದೃಷ್ಟಶಾಲಿಗಳು ಎಂದರು.

ಈ ಸಂದರ್ಭದಲ್ಲಿ ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಕಾರ್ಯದರ್ಶಿ ದಯಾ ಸಾಗರ್ ಚೌಟ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಂಘದ ಅಧ್ಯಕ್ಷ ಗಂಗಾಧರ್ ಮುದಲಿಯಾರ್, ದ.ಕ ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್, ಮಂಗಳೂರು ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ ಹರೀಶ್ ರೈ, ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪ್ರೆಸ್ ಕ್ಲಬ್ ಆಫ್ ಮಂಗಳೂರು ಇವುಗಳ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಮತ್ತು ಎಸ್.ಸೋಮಶೇಖರ್ (ಟಿವಿ9-ಬೆಂಗಳೂರು) ಮುಂತಾದವರು ವೇದಿಕೆಯಲ್ಲಿ ಆಸೀನರಾಗಿದ್ದರು.

ವೆಂಕಟೇಶ್ ಬಂಟ್ವಾಳ (ಹೊಸದಿಗಂತ), ಶಶಿಧರ್ ಪೆಯತ್ತಬೈಲು (ನಮ್ಮನಾಡು), ಸುಕೇಶ್ ಶೆಟ್ಟಿ (ಸುವರ್ಣ), ವಿಲ್ಫ್ರೇಡ್ ಡಿ’ಸೋಜಾ (ಟಿವಿ9), ಅನಿಲ್ ಜೋಗಿ (ಸಿಟಿ ಕೇಬಲ್ ಟಿವಿ ಮಂಗಳೂರು), ದಿವಾಕರ್ ಪದ್ಮಂಝ (ಜನಶ್ರೀ ಟಿವಿ), ದಯಾ ಕುಕ್ಕಾಜೆ (ದಾಯ್ಜಿವರ್ಲ್ಡ್), ಹರೀಶ್ ಬಂಟ್ವಾಳ (ಸುದ್ದಿ ಬಿಡುಗಡೆ), ಸುಪ್ರಿತ್ ಆರ್.ಇರಾ (ಎಎನ್‍ಐ), ಹರೀಶ್ ಮೋಟುಕಾನ (ಉದಯವಾಣಿ), ಸುಧಾಕರ್ ಎರ್ಮಾಳ್ (ವಿಜಯ ಕರ್ನಾಟಕ), ಜಯರಾಮ ಸುವರ್ಣ (ದೂರದರ್ಶನ), ರಸುಲ್ ಷರೀಫ್ (ಸಮಯ) ಸೇರಿದಂತೆ ದೇಶದಾದ್ಯಂತ ಆಗಮಿಸಿದ್ದ ಇತರ ಕನ್ನಡಿಗ ಪತ್ರಕರ್ತರು ಮತ್ತು ವಿಭಾ ಎನ್.ಆರ್ ಮಂಗಳೂರು ಹಾಗೂ ಅನೇಕ ಕನ್ನಡ ಪತ್ರಕರ್ತರು ಉಪಸ್ಥಿತರಿದ್ದರು.

ರಾಯನ್ ಸ್ಕೂಲ್ ಸ್ಟೂಡಿಯೋದ ಆಧುನಿಕ ತಂತ್ರಜ್ಞಾದ ಸೌಲಭ್ಯ, ಮತ್ತು ಅದರಲ್ಲಿ ವಿದ್ಯಾರ್ಥಿಗಳ ಪರಿಣತಿಯನ್ನು ಸಂದರ್ಶಕರಿಗೆ ವಿದ್ಯಾರ್ಥಿಗಳೇ ವಿವರಿಸಿದರು. ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಕಾರ್ಯದರ್ಶಿ ದಯಾ ಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here