ನಮ್ಮ ಬಗ್ಗೆ

ಸುದೀರ್ಘ ಕಾಲದ ಮುಂಬೈ ಕನ್ನಡಿಗರ ಇತಿಹಾಸದಲ್ಲಿ ಇಲ್ಲಿನ ಕನ್ನಡಿಗ ಪತ್ರಕರ್ತರ ಪಾತ್ರವು ಬಹಳ ಮುಖ್ಯವಾದದ್ದು ಸುಮಾರು ನೂರೈವತ್ತು ವರುಷಗಳ ಇತಿಹಾಸ ಹೊಂದಿರುವ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಬದುಕು ವರ್ಣರಂಜಿತವಲ್ಲ , ಕರುಣಾಜನಕ. ನ್ಯಾಯಾಂಗ, ಕಾರ್ಯರಂಗ , ರಾಜ್ಯOಗಗಳಂತೆ ಪತ್ರಿಕಾಹಸವು ಒಂದು ರಾಷ್ಟ್ರದ ಸ್ತOಭಗಳಿದ್ದಂತೆ. ಜಾಗತೀಕರಣದ ಸುಳಿಗಾಳಿಯಲ್ಲಿ ಎಲ್ಲವು ತತ್ತರಿಸುತ್ತಿರುವುದು ಅದಕ್ಕೆ ಪತ್ರಿಕಾರಂಗ ಹೊರತಾಗಿಲ್ಲ ಅದು ಕೂಡ ಇಂದು ಉದ್ಯಮವಾಗಿದೆ ಅಲ್ಲಿ ದುಡಿಯುತ್ತಿರುವ ಪತ್ರಕರ್ತರು ಅತಂತ್ರರಾಗಿರುವುದು ಒಂದು ವಿಪರ್ಯಾಸ.

ಸುಮಾರು ಏಳು ದಶಕಗಳಿಗೂ ಮೇಲ್ಪಟ್ಟು ನಿರಂತರವಾಗಿ ಪ್ರಕಟಣೆ ಗೊಳ್ಳುತ್ತಿರುವ ಮಹತ್ವದ ಪತ್ರಿಕೆ ಮೊಗವೀರ ಅದರ ಜತೆ ಗೂಡಿದ ಬಂಟರವಾಣಿ , ಅಕ್ಷಯ, ಪತ್ರಪುಷ್ಪ, ಗೋಕುಲ ವಾಣಿ, ನೇಸರು,ಇತ್ಯಾದಿ ಮುಖವಾಣಿಗಳು ತೊಂಬತ್ತರ ದಶಕದಲ್ಲಿ ಇಲ್ಲಿಂದ ಪ್ರಕಟಣೆಗೊಳ್ಳಲು ಪ್ರಾರಂಭಿಸಿದ ಕರ್ನಾಟಕಮಲ್ಲ , ಉದಯವಾಣಿ ಪತ್ರಿಕೆಗಳು ಸೇರಿಕೊಂಡು ಒಂದು ಇತಿಹಾಸ ನಿರ್ಮಾಣಗೊಳ್ಳಲು ಪ್ರಾರಂಭವಾಯಿತು.

ಪತ್ರಿಕಾರಂಗದಲ್ಲಿ ದಿನ ರಾತ್ರಿ ದುಡಿಯುತ್ತಿರುವ ಪತ್ರಕರ್ತರಲ್ಲಿ ಅಭಧ್ರತೆ ಕಾಡುತ್ತಿರುವುದನ್ನು ಮನಗಂಡ ಓರ್ವ ಕ್ರಿಯಾಶೀಲ ಪರ್ತಕರ್ತ ರೋನ್ಸ್ ಬಂಟ್ವಾಳ್ , ಈ ಎಲ್ಲ ಪರ್ತಕರ್ತರನ್ನು ಒಗ್ಗೊಡಿಸುವ , ಒಂದೇ ವೇದಿಕೆಯಡಿ ತರುವ ಮೂಲಕ ಕನ್ನಡಿಗ ಪರ್ತಕರ್ತರ ಧ್ವನಿ ಯಾಗುವ ಕನಸು ಕಂಡರು.

ಅದರ ಪ್ರಾಥಮಿಕ ಹಂತವಾಗಿ ದಿನಾಂಕ ೦2-೦7-2೦೦7 ನೇ ಆದಿತ್ಯವಾರದಂದು ಮುಂಬೈಯಲ್ಲಿ ಪ್ರಥಮ ಪತ್ರಿಕಾ ದಿನಾಚರಣೆಯನ್ನು ಆಯೋಜಿಸಲು ನಿಶ್ಚ್ ಯಿಸಿದರು. ಅಂತೆಯೆ ಈ ಕಾರ್ಯಕ್ರಮ ಆಯೋಜಿಸುವ ಪೂರ್ವತಯಾರಿ ನಡೆಸುವಂತೆ ಇದೇ ಸೂಕ್ತ ಸಮಯ ಎಂದರಿತು ಅದೇದಿನ ಪತ್ರಕರ್ತರ ವೇದಿಕೆ ಯೊಂದನ್ನು ಸಂಘಟಿಸಲು ಮುಂದಾದರು ಈ ರೀತಿ “ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ” ದ ಉದಯವಾಯಿತು.

 

(ಪ್ರಥಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ )