ಗುರಿ ಮತ್ತು ಉದ್ದೇಶ

ಮಹಾನಗರ ಮುಂಬೈಯಲ್ಲಿ ಲಕ್ಷಾಂತರ ಕನ್ನಡಿಗರಿದ್ದು, ಅವರ ಆಶೋತ್ತಗಳಿಗೆ ಸ್ಪಂದಿಸಿ ಪತ್ರಿಕಾ ರಂಗದ ಮೂಲಕ ಓದುಗರಿಗೆ ಸಹಜತೆಯನ್ನು ತಿಳಿಸಲು ಕನ್ನಡದ ಅನೇಕ ಮಾಧ್ಯಮಗಳು ಸದಾ ಹಗುಲಿರುಳು ಶ್ರಮಿಸುತ್ತಿವೆ. ಈ ಪರಿಶ್ರಮಿಕ ಕಾಯಕಕ್ಕೆ ಮುಡುಪಾಗಿಟ್ಟು ಪತ್ರಕರ್ತರು ಶ್ರೇಷ್ಠವಾದ ಸ್ನಾನಮಾನದಿಂದ ‘ಪತ್ರಕರ್ತರು ‘ ಎಂದೆಣಿಸಿ ಸಮಾಜದಲ್ಲಿ ಮೇಲ್ನೋಟಕ್ಕೆ ಶೋಭಿಸುತ್ತಿದ್ದಾರೆ ನಿಜ.

ಆದರೆ ಅವರ ನೈಜ ಸ್ಥಿತಿ ಗತಿ , ಮಾನಸಿಕ ಒತ್ತಡ , ಬಿಡುವು ಇಲ್ಲದ ಶ್ರಮದಾಯಕ ಜೀವನ , ಆರ್ಥಿಕ ಪರಿಸ್ಥಿತಿ , ಅರೋಗ್ಯ ಇತ್ಯಾದಿಗಳನ್ನು ಮನವರಿಸಿ ಕೊಂಡಾಗ ಪತ್ರಿಕಾ ಸೇವೆಯ ಬದುಕು ನಿರಾಶೆಯಿಂದ ಆವರಿಸುತ್ತದೆ. ಕೇವಲ ಪ್ರತಿಷ್ಠಿಯ ಉದ್ಯಮವನ್ನಾಗಿರಿಸಿ ಬಾಳುವುದು ಪ್ರಸಕ್ತ ಕಾಲಮಾನಕ್ಕೆ ಉಚಿತವಲ್ಲ. ಆದರೆ ಜೆವನೋಪಾಯಕ್ಕೆ ಪ್ರತಿಷ್ಠಿಯ ಜೊತೆಗೆ ಆರ್ಥಿಕ ಬಲವೋ ಸಮಾನವಾಗಿ ಇರಬೇಕಾಗಿರುದು ಅತ್ಯಾವಶ್ಯ .

ಆದರೆ ಇಂದು ಬಹುತೇಕ ಕನ್ನಡಿಗ ಪತ್ರಕರ್ತರಲ್ಲಿ ಸ್ಥಿತಿ ಚಿಂತಾಜನಕ , ಅನೇಕ ಬಾರಿ ಇಂತಹ ಪತ್ರಕರ್ತರನ್ನು ಸ್ವಂತಿಕೆಯ ಲಾಭಕ್ಕೆ ಬಳಸಿ ಕೊಂಡು ಬಳಿಕ ಅವರನ್ನು ಮೂಲೆಗುಂಪು ಮಾಡುತ್ತಿರುವ ಸ್ವಾರ್ಥ ಮನೋಭಾವದ ಸ್ವಯಂಘೋಷಿತ ನಾಯಕರ ಮತ್ತು ಸಮಾಜಸೇವಕರ ದಬ್ಬಾಳಿಕೆ ಇಂದು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಈ ಪೀಡೆ ಕನ್ನಡದ ಪತ್ರಿಕೋದ್ಯಮ ರಂಗವನ್ನೂ ಬಿಟ್ಟಿಲ್ಲ. ಇಂತಹ ಅನೇಕಾನೇಕ ವಿಚಾರಗಳನ್ನುಮುಂದಿರಿಸಿ ಮುಂಬೈಯಲ್ಲಿನ ಕನ್ನಡ ಲಿಪಿಯ ಪತ್ರಕರ್ತ ಬಾಂಧವರಿಗೆ ಸೂಕ್ತವಾದ ಬದುಕು ರೂಪಿಸಿ ಕೊಡುವ ಭರವಸೆಯ ಪ್ರಯತ್ನವನ್ನು ಮುಂದಿಟ್ಟು ಮುಂಬೈಯಲ್ಲಿನ ನಿವೃತ್ತ ಹಾಗು ಕಾರ್ಯನಿರತ ಕನ್ನಡ ಪತ್ರಕರ್ತರನ್ನು ಒಗ್ಗೂಡಿಸಿ ಒಂದು ಪ್ರತಿಷ್ಠಿತ ‘ಪತ್ರಕರ್ತರ ವೇದಿಕೆಯನ್ನು‘ ರಚಿಸುವುದೇ ಈ ಸಂಘದ ಗುರಿ ಹಾಗು ಉದ್ದೇಶವಾಗಿದೆ.