ಮುಂಬಯಿ, ಜ.01: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು `ಡೈಯರಿ-2023’ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಧರ್ಮಯೋಗಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಗೊಳಿಸಿ ಶುಭಾರೈಸಿದರು.

ಇಂದಿಲ್ಲಿ ನೂತನ ವರ್ಷದ ಶುಭಾವಸರದಿ ಧರ್ಮಸ್ಥಳದ ಕಚೇರಿಯಲ್ಲಿ ಖಾವಂದರರು ಬಿಡುಗಡೆ ಗೊಳಿಸಿದ್ದು ಬಂಟ್ವಾಳ ಶ್ರೀಧಾಮ ಮಾಣಿಲಾ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಅನುಗ್ರಹಿಸಿದರು.

ಈ ಸಂದಭರ್Àದಲ್ಲಿ ಸಂಘದ ಸಲಹಾ ಸಮಿತಿ ಸದಸ್ಯ ಕಡಂದಲೆ ಸುರೇಶ್ ಎಸ್.ಭಂಡಾರಿ, ವಿಶೇಷ ಆಮಂತ್ರಿತ ಸದಸ್ಯ ಡಾ| ಶಿವರಾಮ ಕೆ.ಭಂಡಾರಿ ಉಪಸ್ಥಿತರಿದ್ದು ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.

ಮುಂಬಯಿ, ಜ.11: ಉಪನಗರದಲ್ಲಿನ ಚೆಂಬೂರು ಛೆಡ್ಡಾ ನಗರದ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠÀದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯ `ಡೈಯರಿ-2023′ ಸ್ವೀಕರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್. ಕಾರ್ಯಕಾರಿ ಸಮಿತಿ ಸದಸ್ಯ ಕರುಣಾಕರ್ ವಿ.ಶೆಟ್ಟಿ ಉಪಸ್ಥಿತರಿದ್ದದರು.

 

LEAVE A REPLY

Please enter your comment!
Please enter your name here