ಹದಿನಾಲ್ಕನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ
ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಬೇಕು : ರೋನ್ಸ್ ಬಂಟ್ವಾಳ್

ಮುಂಬಯಿ, ಜು.10: ಸಾಂಘಿಕವಾಗಿ ಮುನ್ನಡೆದಾಗ ಮಾತ್ರ ಸಾಮರಸ್ಯದ ಬದುದು ಹಸನಾಗುವುದು. ಆದ್ದರಿಂದ ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಿ ಸಮಾನತಾ ಮನೋಭಾವದ ಮೇಳೈಕೆ ಅವಶ್ಯವಾಗಿದೆ. ತಮ್ಮತಮ್ಮ ಪತ್ರಿಕಾ ಕಚೇರಿಯಲ್ಲಿ ಮಾತ್ರ ವೃತ್ತಿಸ್ಪರ್ಧೆ ಇರಿಸಿ ಇತರ ಸಮಯ ಪತ್ರಕರ್ತರೆಂಬ ಸಮುದಾಯದ ಐಕ್ಯತೆ ರೂಢಿಸಿ ಕೊಳ್ಳಬೇಕು. ಆವಾಗಲೇ ಸಮಾನತೆಯ ಭಾವನೆ ಮೂಡುವುದು. ಇದು ಬದುಕಿನ ಕೊನೆಯ ಕ್ಷಣಕ್ಕೂ ಭದ್ರ ಬುನಾದಿ ಆಗಬಲ್ಲದು ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾಪೋರೇಟ್ ಪಾರ್ಕ್ ಇದರ ಕ್ಲಬ್ ಹೌಸ್‍ನ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ತನ್ನ ಹದಿನಾಲ್ಕನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ರೋನ್ಸ್ ಬಂಟ್ವಾಳ್ ಮಾತನಾಡಿದರು.

ವೃತ್ತಿ ಬದುಕಿಗಾಗಿ ಕರುನಾಡು ತೊರೆದು ಹೊರನಾಡನ್ನು ಆಯ್ದ ಕನ್ನಡಿಗ ಪತ್ರಕರ್ತರಿಗೆ ಈ ಸಂಸ್ಥೆ ಅಕ್ಷಯವಾಗಿದ್ದು ಮುಂದೊಂದು ದಿನ ಕಾಮದೇನುವಾಗಿ ಆಸರೆಯಾಗಬಹುದು ಎಂದೂ ಬಂಟ್ವಾಳ್ ತಿಳಿಸಿದರು.

ಕಪಸಮ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಗೌ| ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ವೇದಿಕೆಯಲ್ಲಿ ಆಸೀನರಾಗಿದ್ದರು.

ರಂಗ ಎಸ್.ಪೂಜಾರಿ ಸ್ವಾಗತಿಸಿದರು. ರವೀಂದ್ರ ಶೆಟ್ಟಿ ತಾಳಿಪಾಡಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು. ನಾಗೇಶ್ ಪೂಜಾರಿ ಏಳಿಂಜೆ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಡಾ| ಶಿವ ಮೂಡಿಗೆರೆ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಮುನ್ನೋಟ ತಿಳಿಸಿದರು. ನಂತರ ಸಂಘದ 2022-2023ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಪುನಃರ್ ನೇಮಕ ಗೊಳಿಸಲಾಯಿತು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಅನಿತಾ ಪಿ.ಪೂಜಾರಿ ತಾಕೋಡೆ, ಸಲಹಾ ಸಮಿತಿ ಸದಸ್ಯರಾದ ಸಿಎ| ಐ.ಆರ್ ಶೆಟ್ಟಿ, ಡಾ| ಆರ್.ಕೆ.ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ಗ್ರೇಗೋರಿ ಡಿ’ಅಲ್ಮೇಡಾ, ಸುರೇಂದ್ರ ಎ.ಪೂಜಾರಿ, ಪಂಡಿತ್ ನವೀನ್‍ಚಂದ್ರ ಆರ್.ಸನೀಲ್, ಸುಧಾಕರ್ ಉಚ್ಚಿಲ್, ಡಾ| ಸುರೇಶ್ ಎಸ್.ರಾವ್, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಿಎ| ಜಗದೀಶ್ ಬಿ.ಶೆಟ್ಟಿ, ಸಾ.ದಯಾ (ದಯಾನಂದ್ ಸಾಲ್ಯಾನ್), ಸವಿತಾ ಎಸ್.ಶೆಟ್ಟಿ, ಗೋಪಾಲ್ ತ್ರಾಸಿ, ಕರುಣಾಕರ್ ವಿ.ಶೆಟ್ಟಿ, ಸೇರಿದಂತೆ ಸಂಘದ ಸದಸ್ಯರನೇಕರು ಹಾಜರಿದ್ದರು.

ಡಾ| ಆರ್.ಕೆ.ಶೆಟ್ಟಿ ಮಾತನಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರು ಬೇಕೇಕೇಕು. ಪತ್ರಕರ್ತರು ಬಲಶಾಲಿಗಳಾದರೆ ಒಟ್ಟು ಸಮಾಜವೇ ಬಲಿಷ್ಠಗೊಳ್ಳುವುದು. ಬಹುತೇಕ ಪತ್ರಕರ್ತ ಆರ್ಥಿಕ ಸ್ಥಿತಿಗತಿ ಅಸ್ಥಿರತೆಯಲ್ಲಿದ್ದು ಇದಕ್ಕೆ ಉದ್ಯಮಿಗಳು ಮತ್ತು ಸಶಕ್ತರು ಸಹಕರಿಸಬೇಕು. ಹದಿನೈದರ ಮುನ್ನಡೆಯ ಈ ಸಂಸ್ಥೆಯನ್ನೂ ಸುಭದ್ರವಾಗಿಸಬೇಕು ಎಂದು ಸಂಸ್ಥೆಯ ಉನ್ನತಿಗೆ ಶುಭಹಾರೈಸಿದರು.

ಸದಸ್ಯರ ಪರವಾಗಿ ನಿತ್ಯಾನಂದ ಡಿ.ಕೋಟ್ಯಾನ್, ಸದಾಶಿವ ಎ.ಕರ್ಕೇರ ಮಾತನಾಡಿ ಸಂಘದ ಉನ್ನತಿಗಾಗಿ ಸಲಹೆಗಳನ್ನಿತ್ತು ಸಲಹಿದರು. ಗತ ಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಸಲ್ಲಿಲಾಯಿತು. ಡಾ| ಜಿ.ಪಿ ಕುಸುಮಾ ವಂದಿಸಿದರು.

LEAVE A REPLY

Please enter your comment!
Please enter your name here