ಮುಂಬಯಿ (ಆರ್‍ಬಿಐ), ಮೇ.14: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಮತ್ತು ಶಿವಾ’ಸ್ ಪರಿವಾರದ ಸಹಯೋಗದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಇದರೊಂದಿಗೆ ಅತಿಥಿü ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.

ಇಂದಿಲ್ಲಿ ಶನಿವಾರ ಪೂರ್ವಾಹ್ನ ಅಂಧೇರಿ ಪೂರ್ವದ ಲಕ್ಷ್ಮೀ ಇಂಡಸ್ಟ್ರೀಯಲ್ ಎಸ್ಟೇಟ್‍ನ ಶಿವಾಸ್ ಅಕಾಡೆಮಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಬಾಲಿವುಡ್ ರಂಗದಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಶಿವಾ’ಸ್ ಹೇರ್ ಡಿಝೈನರ್ಸ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಮುಖ್ಯ ಅತಿಥಿüಯಾಗಿದ್ದು ಮಾತನಾಡಿ ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು, ಸದೃಢ ಸಮಾಜ ರೂಪಿಸುವಂತಹ ಕೆಲಸ ಮಾಡುತ್ತಾರೆ. ಇಂತಹ ಪತ್ರಕರ್ತರಿಂದ ನಾನು ಪ್ರೆರಿತನಾಗಿರುವೆ. ನಮ್ಮ ಸಮಾಜ ಸೇವೆಯನ್ನು ಗುರುತಿಸುವಲ್ಲಿ ಪತ್ರಕರ್ತರ ಸಹಯೋಗ ಮುಖ್ಯವಾದುದು. ಪತ್ರಕರ್ತರ ಪ್ರಕಾಶನದಿಂದ ನನ್ನ ಕೀರ್ತಿಯು ಬೆಳಗುವಂತಾಯಿತು ಎಂದರು.

ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಬಿ.ಎನ್ ಪುಷ್ಪರಾಜ್ ಸಂವಾದದ ಪ್ರಧಾನಕರಾಗಿದ್ದರು. ಗುಲಾಬಿ ಕೃಷ್ಣ ಟ್ರಸ್ಟ್‍ನ ವಿಶ್ವಸ್ಥ ಸದಸ್ಯೆ ಅನುಶ್ರೀ ಎಸ್.ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀನಿವಾಸ್ ಇಂದಾಜೆ ಮಾತನಾಡಿ ಇದು ನಾಲ್ಕನೇ ಬಾರಿ ಮುಂಬಯಿ ಕಾರ್ಯಕ್ರಮ ಇದಾಗಿದೆ. ಗ್ರಾಮೀಣ ಪ್ರದೇಶದ ಅದರಲ್ಲೂ ದ.ಕ ಪತ್ರಕರ್ತರಿಗೆ ಮುಂಬಯಿಯಲ್ಲಿ ವೇದಿಕೆಯನ್ನು ಒದಗಿಸುತ್ತಾ ಬಂದಿರುವ ಕಪಸಮ ತಂಡಕ್ಕೆ ಅದರಲ್ಲೂ ಅಧ್ಯಕ್ಷರಿಗೆ ಗೌರವನೀಯ. ಮಾತಾಪಿತರ ಸೇವೆಗೆ ಶಿವರಾಮ ಭಂಡಾರಿ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ ಎನ್ನುವುದಕ್ಕೆ ಅವರ ಸರಳತೆಯ ನಡೆ ನುಡಿಗಳೆ ಸಾಕ್ಷಿ. ಬಡತನ ಶಾಪವಲ್ಲ, ಅದೊಂದು ವರ ಎಂದು ತೋರ್ಪಡಿಸಿದ ಸಾಧಕ ಫಲಗಾರನೇ ಶಿವರಾಮ ಭಂಡಾರಿ. ಶಿವಾಸ್ ಸಲ್ಯೂಟ್ ರಾಷ್ಟ್ರದ ಯೋಧರಿಗೆ ತೋರುವ ಗೌರವ ನಮ್ಮೆಲ್ಲರಿಗೆ ಪ್ರೇರಕವಾಗಿದೆ. ಅವರು 3000ಕ್ಕೂ ಹೆಚ್ಚು ವಿದ್ಯಾಥಿರ್sಗಳಿಗೆ ಕೇಶವಿನ್ಯಾಸದ ತರಬೇತಿ ನೀಡಿರುವುದು ಪ್ರೇರಣಾದಾಯಕವಾಗಿದೆ. ನಮ್ಮೂರ ಹುಡುಗರ ಮಹಾತ್ಕಾರ್ಯ ಎಲ್ಲರಿಗೂ ಸ್ಫೂರ್ತಿ ಆಗಿದೆ ಎಂದರು.

ಪತ್ರಕರ್ತರ ಒಂದು ಸಣ್ಣ ಅಧಿವೇಶನ ಇದಾಗಿದೆ. ಮಕ್ಕಳಲ್ಲಿ ಸಂಸ್ಕಾರ ಕಲಿಯಲು ಸಮಾಜಮುಖಿ ಸೇವೆ ಮಾದರಿ ಆಗಿದೆ. ಕೊರೊನಾ ಅವಧಿಯಲ್ಲಿ ಕಪಸಮ ಪತ್ರಕರ್ತರು ಪ್ರಾಯೋಗಿಕವಾದ ಪ್ರಯತ್ನ ಮಾಡಿದ್ದಾರೆ ಎನ್ನುವುದನ್ನು ಇಂದು ತಿಳಿದಿದ್ದೇವೆ. ಪತ್ರಕರ್ತರು ಚಳುವಳಿಯ ರೂಪದಲ್ಲಿರಬೇಕು. ಪತ್ರಕರ್ತರಿಗೆ ಸಾಮಾಜಿಕ ಕಳಕಳಿ ಇರಬೇಕು ಎಂದರು ಜಿತೇಂದ್ರ ಕುಂದೇಶ್ವರ ತಿಳಿಸಿದರು.

ಭಾಸ್ಕರ್ ರೈ ಕಟ್ಟಾ ಮಾತನಾಡಿ ಬದುಕು ಕಟ್ಟಿ ಜೀವಿಸುವ ರೀತಿ ಮಹತ್ವದ್ದು, ಮುಂಬಯಿಗರು ಕರ್ಮ ಭೂಮಿಯೊಂದಿಗೆ ಜನ್ಮಭೂಮಿಗಾಗಿ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಮುಂಬಯಿಗರು ಮಾನವೀಯತೆಗೆ ಮೀರಿದ್ದು ಬೇರೋಂದಿಲ್ಲ. ಇದು ದ.ಕ ತುಳುನಾಡ ಜನರ ವೈವಿಧ್ಯತೆ. ಇದೊಂದು ಸ್ನೇಹ ಸಂಬಂಧ. ಇದನ್ನು ಪತ್ರಕರ್ತರು ಮತ್ತಷ್ಟು ಕಲಿಯುವಂತಿದೆ ಎಂದರು.

ಕರಾವಳಿ ಜನತೆಗೆ ಸ್ಫೂರ್ತಿದಾಯಕ ಜನರೇ ಮುಂಬಯಿಗರು. ಅಕ್ಷಿ ಸಾಕ್ಷಿ ಪತ್ರಕರ್ತರಿಗೆ ಮುಖ್ಯವಾದಾಗ ಪತ್ರಿಕಾ ಗೌರವ ಘನತೆ ಹೆಚ್ಚುವುದು. ಸತ್ಯಮೇವ ಜಯತೆ ಉಳಿದವರಲ್ಲಿ ಮುಂಬಯಿ ತುಳು ಕನ್ನಡಿಗರು ಪ್ರಬಲ ಎಂದು ಬಿ.ಎನ್ ಪುಷ್ಪರಾಜ್ ತಿಳಿಸಿದರು.

ರೋನ್ಸ್ ಬಂಟ್ವಾಳ್ ಮಾತನಾಡಿ ಪತ್ರಕರ್ತರಲ್ಲಿ ಮತ ಭೇದಗಳು ಸಲ್ಲದು. ನಾಡನ್ನು ತಿದ್ದುವ ಪತ್ರಕರ್ತರು ಬುದ್ಧಿವಂತ ಪ್ರಜೆಗಳಾಗಬೇಕು. ಬರವಣಿಗೆಯ ಮೂಲಕ ಬದಲಾವಣೆ, ಸಾಮರಸ್ಯದ ಮೂಲಕ ಸಾಂಘಿಕತೆಗೆ ಕಾರಣಕರ್ತರಾಗಬೇಕು ಎಂದರು.

ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಸತೀಶ್ ಇರಾ, ದಯಾ ಕುಕ್ಕಾಜೆ, ಲಕ್ಷಿ ್ಮೀ ನಾರಾಯಣ ರಾವ್, ಖಲೀಂ ಸೇರಾಜೆ, ಜೀವನ್ ಬಿ.ಎಸ್, ಮೋಹನ್ ಕುತ್ತಾರ್, ಶಶಿಧರ್ ಡಿ.ಬಂಗೇರ, ಸಂದೀಪ್ ಸಾಲಿಯಾನ್, ಆರಿಫ್ ಕಲಕಟ್ಟಾ, ವಿಭಾ ಎಸ್.ನಾಯಕ್ ಸಂವಾದದಲ್ಲಿ ಭಾಗವಹಿಸಿದ್ದರು. ಇತ್ತಿಚೆಗಷ್ಟೇ ಷಷ್ಠ್ಯಪೂರ್ತಿ ಸಂಭ್ರಮಿಸಿದ ಶಿವರಾಮ ಭಂಡಾರಿ ಇವರನ್ನು ನೆರೆದ ಎಲ್ಲಾ ಪತ್ರಕರ್ತರು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.

ಕಪಸಮ ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಸ್ವಾಗತಿಸಿ ಪ್ರಸ್ತಾವನೆಗೈದ ಕರ್ನಾಟಕ ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಮಿನಿ ಸಮ್ಮೇಳನ ಇದಾಗಿದೆ. ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದ ಪತ್ರಕರ್ತ ಸಂಘವು ಸದಸ್ಯರ ಸಮಸ್ಯೆ ಬಗೆ ಹರಿಸುವ ಕಾರ್ಯದಲ್ಲಿಯೂ ನಿರತವಾಗಿದೆ. ನೈತಿಕ, ಆರ್ಥಿಕ , ಆರೋಗ್ಯ ಬಲ ನೀಡಿದ ಕಸಪಮ ಸಾಮಧ್ಯದ ಒಳಗೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದೆ, ಕೊರೊನಾ ಅವಧಿಯಲ್ಲಿಯೂ ಸಂಘವು ಸದಸ್ಯರ ಬೆಂಬಲದಲ್ಲಿ ನಿಂತು ಆರ್ಥಿಕ ನೆರವು ನೀಡುವ ಕಾರ್ಯ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಕಪಸಮ ಕಾರ್ಯಕಾರಿ ಸಮಿತಿ ಸದಸ್ಯೆ ಅನಿತಾ ಪಿ.ಪೂಜಾರಿ ತಾಕೋಡೆ, ವಿಶೇಷ ಆಮಂತ್ರಿತ ಸದಸ್ಯೆ ಸವಿತಾ ಎಸ್.ಶೆಟ್ಟಿ, ಸದಸ್ಯರಾದ ಶ್ರೀನಿವಾಸ ಜೋಕಟ್ಟೆ, ಗಣಪತಿ ಮೊಗವೀರ ಮತ್ತಿತರರು ಉಪಸ್ಥಿತರಿದ್ದು ಗುಲಾಬಿ ಕೃಷ್ಣ ಟ್ರಸ್ಟ್‍ನ ವಿಶ್ವಸ್ಥ ಸದಸ್ಯೆ ಶ್ವೇತಾ ಆರ್.ಭಂಡಾರಿ, ಶಿವಾಸ್ ಪರಿವಾರದ ರಘು ಭಂಡಾರಿ, ರವಿ ಭಂಡಾರಿ, ಮೆಲಿಸಾ ಡಿಕೋಸ್ಟಾ, ಸಿಸಿಲಿಯಾ ಸಿಕ್ವೇರಾ, ಮೊಹ್ಮದ್ ಇಲಿಯಾಸ್ ಮತ್ತಿತರರು ಉಪಸ್ಥಿತರಿದ್ದರು. ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ ಅತಿಥಿsಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಪಸಮ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಕೃತಜ್ಞತೆ ಸಮರ್ಪಿಸಿದರು.

 

LEAVE A REPLY

Please enter your comment!
Please enter your name here