ಮುಂಬಯಿ, ಮಾ.23: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021ರ ಸಾಲಿನ ಕಾರ್ಯಕಾರಿ ಸಮಿತಿಗೆ 15 ಸದಸ್ಯರ ಆಯ್ಕೆಯು ಚುನಾವಣೆ ಮೂಲಕ ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ನಡೆಸಲ್ಪಟ್ಟಿತು.

ಚುನಾವಣೆಯಲ್ಲಿ ಅನಿತಾ ಪಿ.ಪೂಜಾರಿ ತಾಕೋಡೆ (ಟೈಂಮ್ಸ್ ಆಫ್ ಬೆದ್ರ), ಅಶೋಕ್ ಆರ್.ದೇವಾಡಿಗ (ಕರ್ನಾಟಕ ಮಲ್ಲ), ಅಶೋಕ್ ಎಸ್.ಸುವರ್ಣ (ಮೊಗವೀರ), ಡಾ| ದಿನೇಶ್ ಶೆಟ್ಟಿ ರೆಂಜಾಳ (ಉದಯವಾಣಿ), ಡಾ| ಜಿ.ಪಿ ಕುಸುಮಾ (ಸಾಫಲ್ಯ), ಗುರುದತ್ತ್ ಎಸ್.ಪೂಂಜಾ (ಕರ್ನಾಟಕ ಮಲ್ಲ), ಜಯರಾಮ ಎನ್.ಶೆಟ್ಟಿ (ಯಶಸ್ವಿ ವ್ಯಕ್ತಿ), ನಾಗರಾಜ್ ಕೆ.ದೇವಾಡಿಗ (ಉದಯವಾಣಿ), ನಾಗೇಶ್ ಎಲ್.ಪೂಜಾರಿ ಏಳಿಂಜೆ (ಕರ್ನಾಟಕ ಮಲ್ಲ), ಪ್ರೀತಂ ಎನ್.ದೇವಾಡಿಗ (ನಮ್ಮ ಟಿವಿ), ರಂಗ ಎಸ್.ಪೂಜಾರಿ (ಕರಾವಳಿ ಬಿಲ್ಲವ), ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ (ಉದಯವಾಣಿ), ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ), ಡಾ| ಶಿವ ಮೂಡಿಗೆರೆ (ಮುಂಬಯಿ ನ್ಯೂಸ್), ಸುರೇಶ್ ಶೆಟ್ಟಿ ಯೆಯ್ಯಾಡಿ, ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ (ಕರ್ನಾಟಕ ಮಲ್ಲ) ಸೇರಿದಂತೆ 16 ಅಭ್ಯಥಿರ್ಗಳು ಕಣದಲ್ಲಿದ್ದರು.

ಸ್ಪರ್ಧೆಗೆ 22 ಅಭ್ಯಥಿರ್ಗಳು ನಾಮಪತ್ರ ಸಲ್ಲಿಸಿದ್ದು ಆ ಪಯ್ಕಿ ಎರಡು ತಿರಸ್ಕರಿಸಲ್ಪಟ್ಟರೆ, ಇತರ ಮೂವರು ಸ್ವಇಚ್ಫೆಯಿಂದ ನಾಮಪತ್ರಗಳನ್ನು ಹಿಂಪಡೆದಿದ್ದರು. ಕೊನೆ ಗಳಿಗೆಯಲ್ಲಿ ಎರಡೆರಡು ಬಾರಿ ನಾಮಪತ್ರ ಹಿಂಪಡೆದನ್ನು ಪ್ರಕಟಿಸಿಯೂ ಅಂತಿಮವಾಗಿ ಕಣದಲ್ಲಿ ಉಳಿದ ಸುರೇಶ್ ಶೆಟ್ಟಿ ಯೆಯ್ಯಾಡಿ ಸ್ಪರ್ಧಿಸಿಯೂ ಕೆಲವೇ ಮತಗಳನ್ನು ಪಡೆದು ಪರಾಭವರಾಗಿದ್ದು, ಉಳಿದ ಅಭ್ಯಥಿರ್ಗಳೆಲ್ಲರೂ ಭರ್ಜರಿ ಮತಗಳಿಂದ ವಿಜೇತರೆಣಿಸಿದರು.

ಪತ್ರಕರ್ತರ ಸಂಘದ ಹಿರಿಯ ಸಲಹಾಗಾರ, ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಮುಖ್ಯ ಚುನಾವಣಾಧಿಕಾರಿ ಆಗಿ ಹಾಗೂ ಸಾ.ದಯಾ ಮತ್ತು ಗೋಪಾಲ್ ತ್ರಾಸಿ ಸಹಾಯಕ ಚುನಾವಣಾಧಿಕಾರಿ ಗಳಾಗಿ ಚುನಾವಣಾ ಪ್ರಕ್ರಿಯೆ ನಡೆಸಿ ವಿಜೇತ ಅಭ್ಯಥಿರ್ಗಳ ಫಲಿತಾಂಶ ಪ್ರಕಟಿಸಿದರು. ಬಳಿಕ ವಿಜೇತರ ಫಲಿತಾಂಶದ ಪ್ರತಿಯನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರಿಗೆ ಹಸ್ತಾಂತರಿಸಿ ವಿಜೇತ ತಂಡಕ್ಕೆ ಅಭಿನಂದಿಸಿದರು.

ಸಭೆಯಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ (ನಿರ್ಗಮನ) ಜತೆ ಕೋಶಾಧಿಕಾರಿ ಅಶೋಕ್ ಎಸ್.ಸುವರ್ಣ, ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ಸುಜಾನ್ಹಾ ಲಾರೆನ್ಸ್ ಕುವೆಲ್ಲೋ, ಸಲಹಾ ಸಮಿತಿ ಸದಸ್ಯರುಗಳಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೆಗೋರಿ ಡಿ’ಅಲ್ಮೇಡಾ, ಡಾ| ಸುನೀತಾ ಎಂ.ಶೆಟ್ಟಿ, ಸುರೇಂದ್ರ ಎ. ಪೂಜಾರಿ, ನ್ಯಾ| ವಸಂತ ಎಸ್.ಕಲಕೋಟಿ, ವಿಶೇಷ ಆಮಂತ್ರಿತ ಸದಸ್ಯರಾದ ನ್ಯಾ| ವಸಂತ ಎಸ್.ಕಲಕೋಟಿ, ಸುಧಾಕರ್ ಉಚ್ಚಿಲ್ ಉಪಸ್ಥಿತರಿದ್ದು, ಜಗದೀಶ್ ಡಿ.ರೈ, ಶಿಮುಂಜೆ ಪರಾರಿ ಪದ್ಮನಾಭ ಎಸ್.ಶೆಟ್ಟಿ, ಭೀಮರಾಯ ಚಿಲ್ಕಾ, ರಾಜೇಂದ್ರ ಮಡಿವಾಳ ಚುನಾವಣಾ ಸಹಾಯಕರಾಗಿ ಸಹಕರಿಸಿದ್ದರು.

ಸಂಘದ ಬಯ್ಲಾಸ್ ಪ್ರಕಾರ ಮೂರು ವರ್ಷಗಳಿಗೊಮ್ಮೆ ಬ್ಯಾಲೇಟ್ ಪೇಪರ್ ಮತದಾನ ಮೂಲಕವೇ ಸದಸ್ಯರ ಆಯ್ಕೆ ನಡೆಯಬೇಕಾಗಿದ್ದು ಹತ್ತನೇ ಮಹಾಸಭೆಯಲ್ಲಿ 2019-2021ರ ಸಾಲಿಗೆ ಅವಿರೋಧವಾಗಿ ಆಯ್ಕೆಯಾದ 15 ಮಂದಿ ಸದಸ್ಯರ ಆಯ್ಕೆಯನ್ನು ಕೆಲವೊಂದು ಸದಸ್ಯರು ವಿರೋಧಿಸಿದ ಮಹಾಸಭೆಯ ನಂತರದ ಆರು ತಿಂಗಳ ಕಾಲದೊಳಗೆ ಚುನಾವಣೆ ನಡೆಸುವಂತೆ ಮಹಾಸಭೆ ಘೋಷಿಸಿತ್ತು.

LEAVE A REPLY

Please enter your comment!
Please enter your name here