(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಎ.11: ದೇಶದ ಜನತೆ ಖುಷಿ ಪಡುವ ಏನನ್ನಾದರೂ ಕೊಡಬೇಕು, ಮತ್ತು ಹಾಗೆ ಕೊಟ್ಟದ್ದು ಅದುವರೆಗೆ ಜನರು ಕೊಟ್ಟದ್ದಕ್ಕಿ0ತ ಭಿನ್ನವಾದದ್ದು-ಹೊಸತಾದದ್ದಾಗಿರಬೇಕು, ಇದು ನನ್ನ ಬಯಕೆ. ಇ0ತಹಾ ತುಡಿತವೊ0ದರ ಫಲವಾಗಿಯೇ ಐಮ್ಯಾಜಿಕಾ ಥಿಮ್ ಪಾರ್ಕ್ ಹುಟ್ಟಿಕೊ0ಡಿತು ಎಂದು ಆ್ಯಡ್ ಲ್ಯಾಬ್ಸ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಮನ್‍ಮೋಹನ್ ಆರ್.ಶೆಟ್ಟಿ ತಿಳಿಸಿದರು.

ಕಳೆದ ಸೋಮವಾರ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಆಯೋಜಿಸಿರುವ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶದ ಮಧ್ಯಾಂತರದ ಕಾರ್ಯಕ್ರಮದಲ್ಲಿ ಮುಂಬಯಿ-ಪುಣೆ ರಸ್ತೆಯಲ್ಲಿನ ಕಲಾಪುರ್ ಟೋಲ್ ಪ್ಲಾಜ್ಹಾ ಸನಿಹದ ಸಂಗ್ಡೇವಾಡಿ ಅಲ್ಲಿನ ಪಾಲಿ ಖೊಪೊಲಿ ರಸ್ತೆಯಲ್ಲಿನ ಏಷ್ಯಾ ಖಂಡದ ಏಕೈಕ ಬೃಹತ್ ಮನೋರಂಜನಾ ಪ್ರವಾಸಿ ತಾಣ (ಎಂಟರ್‍ಟೇನ್ಮೆಂಟ್ ರೆಝಾರ್ಟ್) ಇಮ್ಯಾಜಿಕಾ ಎಂಟರ್‍ಟೇ ನ್ಮೆಂಟ್ ಪಾರ್ಕ್‍ನ ಬಾಂಕ್ವೇಟ್ ಸಭಾಗೃಹದಲ್ಲಿ ನೆರೆದ 150ಕ್ಕೂ ಅಧಿಕ ಕನ್ನಡ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ ಖೊಪೊಲಿ ಸಮೀಪ ಇರುವ ದೇಶದ ಅತಿ ದೊಡ್ಡ ಥಿಮ್ ಪಾರ್ಕ್ ಐಮ್ಯಾಜಿಕಾ ದಲ್ಲಿ ಕನ್ನಡಿಗ ಪತ್ರಕರ್ತರ ಸ0ಘ ಮಹಾರಾಷ್ಟ್ರ ಇದರ ಆಶ್ರಯದಲ್ಲಿ ಅಖಿಲ ಭಾರತ ವ್ಯಾಪ್ತಿಯಿ0ದ ಬ0ದ ಕನ್ನಡ ಪತ್ರಕರ್ತ ಪ್ರತಿನಿಧಿಗಳ ಜೊತೆ ಸ್ನೇಹ ಮಿಲನದಲ್ಲಿ ಅವರು ಮಾತನಾಡುತ್ತಾ ಸಿನಿಮಾ ಇರಬಹುದು, ಉದ್ಯಮ ಇರಬಹುದು ಬದುಕಿನಲ್ಲಿ ಸದ್ದಾ ಹೊಸತನ್ನೇ ಅನ್ವೇಷಿಸಿದ್ದೇನೆ, ಮಾಡಿದ್ದೇನೆ . ಐ ಮ್ಯಾಜಿಕಾ ದಲ್ಲಿ ನನ್ನ ನಲವತ್ತು ವರ್ಷಗಳ ಸ0ಪಾದನೆಯನ್ನೇ ತೊಡಗಿಸಿದ್ದೇನೆ, ಅಪಾರ ಪ್ರಮಾಣದ ಸಮಯ ಯೋಜನೆ, ಯೋಚನೆ ಹಾಗೂ ಕೌಶಲ್ಯಗಳ ವಿನಿಯೋಗವಾಗಿದೆ, ಒಟ್ಟಾರೆ ಇಲ್ಲಿಗೆ ಭೇಟಿ ನೀಡಿದವರ ಬಾಯಿಯಿ0ದ ಹೊರಡುವ ಖುಷಿಯ “ವಾವ್” ಎ0ಬ ಉದ್ಗಾರದಲ್ಲೇ ನನ್ನ ಖುಷಿಯೂ ಸೇರಿದೆ ಎಂದರು ಹಾಗೂ ನಾನೂ ಗ್ರಾಮೀಣ ಪ್ರದೇಶದಿಂದ ಬಂದವನು. ಅಂತಹ ಗ್ರಾಮೀಣ ಪ್ರದೇಶದ ನೂರರು ಪ್ರತಿಭಾನ್ವಿತ ಪತ್ರಕರ್ತರನ್ನು ಒಗ್ಗೂಡಿಸಿ ಮಾಯಾನಗರಿಗೆ ಬರಮಾಡಿಕೊಂಡು ಪತ್ರಕರ್ತರಿಗೆ ಪ್ರೋತ್ಸಹಿಸಿದ ಮಿತ್ರ ರೋನ್ಸ್ ಬಂಟ್ವಾಳ್ ಅವರ ಕಾರ್ಯವೈಖರಿ ಪ್ರಶಂಸನೀಯ ಎಂದು ಸಮಾವೇಶಕ್ಕೆ ಶುಭಾರೈಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ವಿಶ್ವಾತ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ವಿವೇಕ್ ಶೆಟ್ಟಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಅಖಿಲ ಭಾರತ ಮಾನವಾಧಿಕಾರ ಹಕ್ಕುಗಳ ಸಂಘಟನಾ ರಾಯಗಢ ಜಿಲ್ಲಾಧ್ಯಕ್ಷ ಶಿವ ಮೂಡಿಗೆರೆ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿ ಪತ್ರಿಕಾ ಗೋಷ್ಠಿ ಹಾಗೂ ಕಾರ್ಯಕ್ರಮ ನಿರ್ವಾಹಿದರು. ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ವಂದಿಸಿದರು.

 

LEAVE A REPLY

Please enter your comment!
Please enter your name here