ಮುಂಬಯಿ, ಸೆ.15: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನೇತೃತ್ವದ ಸಂಘದ ನಿಯೋಗವು ಇಂದಿಲ್ಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರನ್ನು ಭೇಟಿಗೈದು ಸಂಘದ ಸದಸ್ಯರಿಗೆ ನಿವೇಶನ ಒದಗಿಸುವಂತೆ ಮನವಿಮಾಡಿತು.

ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರಿಗೆ ಸಂಘವು ನವಿಮುಂಬಯಿ ಯಲ್ಲಿ ನಿರ್ಮಾಣವಾಗುವ ಕರ್ನಾಟಕ ಭವನದಲ್ಲಿ ಪತ್ರಕರ್ತರ ಸಂಘಕ್ಕೆ ಸ್ಥಳಾವಕಾಶ ವಿಚಾರವಾಗಿ ಮನವಿ ಮಾಡಿದಾಗ ಮುಖ್ಯಮಂತ್ರಿ ಅವರು ತಮ್ಮಲ್ಲಿ ಈ ಕೆಲಸವನ್ನು ವಹಿಸಿದಾಗ ತಾವು ನಮ್ಮಲ್ಲಿ ಸಂಪರ್ಕದಲ್ಲಿ ದ್ದು ತ್ವರಿತವಾಗಿ ಸ್ಪಂದಿಸಿರುವುದನ್ನು ನೆನಪಿಸಿ ಕನ್ನಡಿಗ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಆಗಿ ರೋನ್ಸ್ ಬಂಟ್ವಾಳ್ ಸಂಸದರನ್ನು ಅಭಿವಂದಿಸಿದರು.

ಸಂಘದಲ್ಲಿ ಸದ್ಯ ಮಹಾರಾಷ್ಟ್ರ ರಾಜ್ಯದಾದ್ಯಂತದ ನೂರಾರು ಸದಸ್ಯರುಗಳಿದ್ದು ಅವರು ದೇಶ ವಿದೇಶಗಳಿಂದ ಪ್ರಕಾಶಿತಗೊಳ್ಳುವ ಪ್ರಮುಖ ಕನ್ನಡ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಲು, ಸಂಘದ ಸಭೆ, ಪತ್ರಿಕಾಗೋಷ್ಠಿಗಳನ್ನು ಸೇರಿದಂತೆ ನಗರಕ್ಕಾಗಮಿಸುವ ಅತಿಥಿ ಪತ್ರಕರ್ತರಿಗೆ ಸಹಯೋಗ, ಸದಸ್ಯರುಗಳಿಗೆ ನಿವೇಶನ ನಿರ್ಮಿಸಿ ಕೊಡುವರೇ `ಕನ್ನಡಿಗ ಪತ್ರಕರ್ತರ ನಿವೇಶನ’ ನಿರ್ಮಿಸುವುದರೊಂದಿಗೆ ಸಂಘದ ಸದಸ್ಯರ `ಆರೋಗ್ಯ ನಿಧಿ’ಗಾಗಿ ವ್ಯಯಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿರುವ ಬಗ್ಗೆಯೂ ರೋನ್ಸ್ ಬಂಟ್ವಾಳ್ ಸಂಸದರಿಗೆ ಮನವರಿಸಿದರು.

ಕನ್ನಡಿಗ ಪತ್ರಕರ್ತರ ನಿವೇಶನಕ್ಕೆ ತಾವು ಮುಂದಾಳುತ್ವ ವಹಿಸಿ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ವಸತಿ ಸಚಿವ ಪ್ರಕಾಶ್ ಮೆಹ್ತಾ ಅವರೊಂದಿಗೆ ನಮ್ಮ ಯೋಜನೆಯ `ಕನ್ನಡಿಗ ಪತ್ರಕರ್ತರ ನಿವೇಶನ’ಕ್ಕೆ ಸಹಕರಿಸುವಂತೆ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಸಂಸದ ಗೋಪಾಲ ಶೆಟ್ಟಿ ಅವರಿಗೆ ಮನವಿ ಮಾಡಿದರು.

ತಮ್ಮ ಸತತ ಪ್ರಯತ್ನದಿಂದ ಉಪನಗರ ಪಶ್ಚಿಮ ರೈಲ್ವೇಯ ಯಾತ್ರಿಗಳ ಅನುಕೂಲಕ್ಕಾಗಿ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್‍ನಿಂದ ಈ ರೈಲು ಸೇವೆ ಕೊಂಕಣ ಮಾರ್ಗವಾಗಿ ಆರಂಭಿಸಲಾದ ವಸಾಯಿರೋಡ್ ಮಂಗಳೂರು ಗಣಪತಿ ವಿಶೇಷ ರೈಲು ಸೇವೆಯನ್ನು ಖಾಯಂಗೊಳಿಸುವಂತೆ ಹಾಗೂ ಮುಂಬಯಿ ಮಂಗಳೂರು ಬೆಂಗಳೂರು ನೂತನ ರೈಲುಯಾನ ಆರಂಭಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆಯೂ ಚಂದ್ರಶೇಖರ ಪಾಲೆತ್ತಾಡಿ ಅವರು ಸಂಸದ ಗೋಪಾಲ ಶೆಟ್ಟಿ ಅವರಿಗೆ ಸಲಹಿದರು.

ಉಪಾಧ್ಯಕ್ಷ ದಯಾ ಸಾಗರ್ ಚೌಟ ಗೌರವ ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ, ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು, ಜತೆ ಕಾರ್ಯದರ್ಶಿ ಆಗಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ಯಾಮ್ ಎಂ.ಹಂಧೆ, ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ಜನಾರ್ಧನ ಎಸ್. ಪುರಿಯಾ, ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಶಿವ ಎಂ.ಮೂಡಿಗೆರೆ, ಸಲಹಾ ಸಮಿತಿ ಸದಸ್ಯರುಗಳಾದ ಸಿಎ| ಐ.ಆರ್ ಶೆಟ್ಟಿ, ಗ್ರೆಗೋರಿ ಡಿ’ಅಲ್ಮೇಡಾ, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯ ಸುರೇಶ್ ಶೆಟ್ಟಿ ಉಪಸ್ಥಿತರಿದ್ದು, ಸಂಸದ ಗೋಪಾಲ ಶೆಟ್ಟಿ ಅವರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here