ಮುಂಬಯಿ, ಜ.03: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ದ್ವಿತೀಯ ದಿನಚರಿ ಪುಸ್ತಕ (ಡೈಯರಿ) ಯನ್ನೊಳಗೊಂಡ ಮಾಹಿತಿಸೂಚಿ ಕೈಪಿಡಿ (ಡಿರೆಕ್ಟರಿ)ಯನ್ನು ಸಾಯಿಕೇರ್ ಲಾಜೆಸ್ಟಿಕ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಸುರೇಂದ್ರ ಎ.ಪೂಜಾರಿ ಅವರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.

ಇಂದಿಲ್ಲಿ ಗುರುವಾರ ಪೂರ್ವಾಹ್ನ ಪೂವಾಯಿ ಹಿರಾನಂದನಿ ಪಾರ್ಕ್‍ಸೈಟ್ ಇಲ್ಲಿನ ಕೈಲಾಸ್ ಕಾಪೆರ್ರೇಟ್ ಲಾಂಜ್‍ನ ಸಾಯಿಕೇರ್ ಸಮಾಲೋಚನಾ ಸಭಾಗೃಹದಲ್ಲಿ ನಡೆಸಲಾದ ಸರಳ ಕಾರ್ಯಕ್ರಮದಲ್ಲಿ ಡೈರೆಕ್ಟರಿ ಬಿಡುಗಡೆಗೊಳಿಸಿದ ಸುರೇಂದ್ರ ಪೂಜಾರಿ ಅವರು ಮಹಾನಗರದಲ್ಲಿ ಕನ್ನಡಿಗ ಪತ್ರಕರ್ತರ ಏಕತೆಯನ್ನು ಪ್ರಶಂಸಿಸುತ್ತಾ ಬಹುತೇಕ ಕನ್ನಡಿಗರು ಆಂಗ್ಲ ದಾಸ್ಯಕ್ಕೆ ಒಳಗಾಗುತ್ತಿರುವ ಕಾಲದಲ್ಲೂ ಹೊರನಾಡ ಮರಾಠಿ ನೆಲದಲ್ಲಿ ಮಾತೃಭಾಷೆಯನ್ನೇ ಮಾಧ್ಯಮವಾಗಿರಿಸಿ ಕನ್ನಡದ ಕಳಕಳಿಯಿಂದ ಶ್ರಮಿಸುವ ಮುಂಬಯಿ ನೆಲೆಯ ಕನ್ನಡಿಗ ಪತ್ರಕರ್ತರು ಸರ್ವ ಶ್ರೇಷ್ಠರು. ದಿನವಿಡೀ ಒಬ್ಬೊಬ್ಬ ಪತ್ರಕರ್ತರು ಮಹಾನಗರದಾದ್ಯಂತ ಸುತ್ತಾಡಿ ಹಲವು ವರದಿಗಳನ್ನು ಸಂಗ್ರಹಿಸುತ್ತಿರುವುದು ಮುಂಬಯಿಯ ಕನ್ನಡಿಗ ಪತ್ರಕರ್ತರ ವೈಶಿಷ್ಟ ್ಯ. ಇಂತಹ ಅಪರೂಪದ ಪತ್ರಕರ್ತರ ಶ್ರಮ ಶ್ಲಾಘನೀಯ. ಭಾಷೆ-ಪ್ರಾದೇಶಿಕ ವಿಚಾರ ಸೇರಿದಂತೆ ಯಾವುದಕ್ಕೂ ಜಗ್ಗದಿರುವ ಕನ್ನಡಿಗ ಪತ್ರಕರ್ತರ ಭಾಷಾಭಿವೃದ್ಧಿ ಕಾಳಜಿ ಸ್ತುತ್ಯಾರ್ಹ. ಸತ್ಯವನ್ನು ವಿಶ್ಲೇಷಿಸಿ ಓದುಗಾಸ್ತಕರಿಗೆ ಸುದ್ದಿಗಳನ್ನು ಉಣಬಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಗೌರವಿಸುವ ಅಗತ್ಯ ಸಮಾಜಕ್ಕಿದೆ. ಪತ್ರಕರ್ತರೂ ಆ ಗೌರವಕ್ಕೆ ತಕ್ಕಂತೆ ಶ್ರಮಿಸುವುದೂ ಅಷ್ಟೇ ಅತ್ಯವಶ್ಯ. ಸಮಾಜದ ಸವಾಲನ್ನು ಸ್ವೀಕರಿಸಿ ಶ್ರಮಿಸುವ ಪತ್ರಕರ್ತರಲ್ಲಿ ಪಾರದರ್ಶಕತ್ವ ಅಗತ್ಯವಿದ್ದು, ವ್ಯಕ್ತಿ ಪ್ರೇರಿತ ವರದಿಗಾರರಾಗದೆ ಸಮಾಜ ಕಟ್ಟುವ ಶಕ್ತಿಯಾಗಿ ಬೆಳೆಯಬೇಕು. ಈ ಸಂಘಟನೆಯ ಎಲ್ಲಾ ಯೋಜನೆಗಳು ಫಲಪ್ರದಗೊಂಡು ಸದಸ್ಯ ಪತ್ರಕರ್ತರೆಲ್ಲರಿಗೂ ಈ ಸಂಸ್ಥೆ ಪ್ರೇರಣೆ ಮತ್ತು ಮಾದರಿಯಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ಯಾಮ್ ಎಂ.ಹಂಧೆ ಮತ್ತು ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು ಸಂಘದ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ. ಪೂಜಾರಿ ಮುಂತಾದ ಪದಾಧಿಕಾರಿಗಳು ಹಾಜರಿದ್ದು, ಉಪಾಧ್ಯಕ್ಷ ದಯಾಸಾಗರ್ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎನ್.ಸುರೇಶ್ ಧನ್ಯವಾದ ಸಮರ್ಪಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ದ್ವಿತೀಯ ಕೈಪಿಡಿ-ವಾರ್ಷಿಕ ಡೈರೆಕ್ಟರಿ ಬಿಡುಗಡೆ
ಮುಂಬಯಿ ಕನ್ನಡಿಗ ಪತ್ರಕರ್ತರು ಸರ್ವ ಶ್ರೇಷ್ಠರು : ಸುರೇಂದ್ರ ಪೂಜಾರಿ
ಮುಂಬಯಿ, ಜ.03: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ದ್ವಿತೀಯ ದಿನಚರಿ ಪುಸ್ತಕ (ಡೈಯರಿ) ಯನ್ನೊಳಗೊಂಡ ಮಾಹಿತಿಸೂಚಿ ಕೈಪಿಡಿ (ಡಿರೆಕ್ಟರಿ)ಯನ್ನು ಸಾಯಿಕೇರ್ ಲಾಜೆಸ್ಟಿಕ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಸುರೇಂದ್ರ ಎ.ಪೂಜಾರಿ ಅವರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.

ಇಂದಿಲ್ಲಿ ಗುರುವಾರ ಪೂರ್ವಾಹ್ನ ಪೆÇವಾಯಿ ಹಿರಾನಂದನಿ ಪಾರ್ಕ್‍ಸೈಟ್ ಇಲ್ಲಿನ ಕೈಲಾಸ್ ಕಾಪೆರ್ರೇಟ್ ಲಾಂಜ್‍ನ ಸಾಯಿಕೇರ್ ಸಮಾಲೋಚನಾ ಸಭಾಗೃಹದಲ್ಲಿ ನಡೆಸಲಾದ ಸರಳ ಕಾರ್ಯಕ್ರಮದಲ್ಲಿ ಡೈರೆಕ್ಟರಿ ಬಿಡುಗಡೆಗೊಳಿಸಿದ ಸುರೇಂದ್ರ ಪೂಜಾರಿ ಅವರು ಮಹಾನಗರದಲ್ಲಿ ಕನ್ನಡಿಗ ಪತ್ರಕರ್ತರ ಏಕತೆಯನ್ನು ಪ್ರಶಂಸಿಸುತ್ತಾ ಬಹುತೇಕ ಕನ್ನಡಿಗರು ಆಂಗ್ಲ ದಾಸ್ಯಕ್ಕೆ ಒಳಗಾಗುತ್ತಿರುವ ಕಾಲದಲ್ಲೂ ಹೊರನಾಡ ಮರಾಠಿ ನೆಲದಲ್ಲಿ ಮಾತೃಭಾಷೆಯನ್ನೇ ಮಾಧ್ಯಮವಾಗಿರಿಸಿ ಕನ್ನಡದ ಕಳಕಳಿಯಿಂದ ಶ್ರಮಿಸುವ ಮುಂಬಯಿ ನೆಲೆಯ ಕನ್ನಡಿಗ ಪತ್ರಕರ್ತರು ಸರ್ವ ಶ್ರೇಷ್ಠರು. ದಿನವಿಡೀ ಒಬ್ಬೊಬ್ಬ ಪತ್ರಕರ್ತರು ಮಹಾನಗರದಾದ್ಯಂತ ಸುತ್ತಾಡಿ ಹಲವು ವರದಿಗಳನ್ನು ಸಂಗ್ರಹಿಸುತ್ತಿರುವುದು ಮುಂಬಯಿಯ ಕನ್ನಡಿಗ ಪತ್ರಕರ್ತರ ವೈಶಿಷ್ಟ ್ಯ. ಇಂತಹ ಅಪರೂಪದ ಪತ್ರಕರ್ತರ ಶ್ರಮ ಶ್ಲಾಘನೀಯ. ಭಾಷೆ-ಪ್ರಾದೇಶಿಕ ವಿಚಾರ ಸೇರಿದಂತೆ ಯಾವುದಕ್ಕೂ ಜಗ್ಗದಿರುವ ಕನ್ನಡಿಗ ಪತ್ರಕರ್ತರ ಭಾಷಾಭಿವೃದ್ಧಿ ಕಾಳಜಿ ಸ್ತುತ್ಯಾರ್ಹ. ಸತ್ಯವನ್ನು ವಿಶ್ಲೇಷಿಸಿ ಓದುಗಾಸ್ತಕರಿಗೆ ಸುದ್ದಿಗಳನ್ನು ಉಣಬಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಗೌರವಿಸುವ ಅಗತ್ಯ ಸಮಾಜಕ್ಕಿದೆ. ಪತ್ರಕರ್ತರೂ ಆ ಗೌರವಕ್ಕೆ ತಕ್ಕಂತೆ ಶ್ರಮಿಸುವುದೂ ಅಷ್ಟೇ ಅತ್ಯವಶ್ಯ. ಸಮಾಜದ ಸವಾಲನ್ನು ಸ್ವೀಕರಿಸಿ ಶ್ರಮಿಸುವ ಪತ್ರಕರ್ತರಲ್ಲಿ ಪಾರದರ್ಶಕತ್ವ ಅಗತ್ಯವಿದ್ದು, ವ್ಯಕ್ತಿ ಪ್ರೇರಿತ ವರದಿಗಾರರಾಗದೆ ಸಮಾಜ ಕಟ್ಟುವ ಶಕ್ತಿಯಾಗಿ ಬೆಳೆಯಬೇಕು. ಈ ಸಂಘಟನೆಯ ಎಲ್ಲಾ ಯೋಜನೆಗಳು ಫಲಪ್ರದಗೊಂಡು ಸದಸ್ಯ ಪತ್ರಕರ್ತರೆಲ್ಲರಿಗೂ ಈ ಸಂಸ್ಥೆ ಪ್ರೇರಣೆ ಮತ್ತು ಮಾದರಿಯಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ಯಾಮ್ ಎಂ.ಹಂಧೆ ಮತ್ತು ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು ಸಂಘದ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ. ಪೂಜಾರಿ ಮುಂತಾದ ಪದಾಧಿಕಾರಿಗಳು ಹಾಜರಿದ್ದು, ಉಪಾಧ್ಯಕ್ಷ ದಯಾಸಾಗರ್ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎನ್.ಸುರೇಶ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here