ಮುಂಬಯಿ, ಮೇ.24: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲ ಉತ್ಕರ್ಷ್ ನಗರ್ ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಛೇರಿಗೆ ಭೇಟಿ ನೀಡಿದರು.

ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಹಿರಿಯ ಪತ್ರಕರ್ತ, ಅಂಕಣಕಾರ-ಚಿಂತಕ, ರವಿ.ರಾ.ಅಂಚನ್, ಸಂಘದ ಸಲಹಾಗಾರ ಗ್ರೇಗರಿ ಎಲ್.ಡಿ’ಅಲ್ಮೇಡಾ ಮತ್ತು ಉದ್ಯಮಿ ಸುಧಾಕರ್ ಉಚ್ಚಿಲ್ ಅವರು ವೇದಿಕೆಯಲ್ಲಿ ಆಸೀನರಿದ್ದು, ದಿನೇಶ್ ಮಟ್ಟು ಅವರ ಅನೇಕ ದಶಕಗಳ ಪತ್ರಿಕೋದ್ಯಮದ ಅಮೂಲ್ಯ ಸೇವೆಯನ್ನು ಮನವರಿಸಿ ಸಂಘದ ಪರವಾಗಿ ಪಾಲೆತ್ತಾಡಿ ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆ-ಪುಷ್ಪಗುಪ್ಚವನ್ನಿತ್ತು ಗೌರವಿಸಿ ಅಭಿನಂದಿಸಿದರು.

ಪತ್ರಕರ್ತರು ತಮ್ಮನ್ನು ತಾವೇ ನಿಯಂತ್ರಿಸಿ ಕೊಳ್ಳುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವನಿಯಂತ್ರಣವನ್ನು ರೂಪಿಸಿ ಕೊಳ್ಳಬೇಕು. ಸ್ವಯಂ ಕಟ್ಟುಪಾಡುಗಳನ್ನು ಕಾಪಾಡಿ ಕೊಳ್ಳುವ ಅಗತ್ಯ ಪ್ರÀತೀಯೋರ್ವ ಜವಾಬ್ದಾರಿಯುತ ಪತ್ರಕರ್ತನ ಹಕ್ಕು ಆಗಿದೆ. ಉತ್ಪದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಪತ್ರಿಕೆಗಳು ಮಾರುತ್ತಿರುವುದರಿಂದ ಪ್ರಸ್ತುತ ರಾಷ್ಟ್ರದಲ್ಲಿನ ಅನೇಕ ಮುದ್ರಣ ಮಾಧ್ಯಮಗಳು ಮುಚ್ಚಿ ಹೋಗುತ್ತಿರುವುದು ವಿಷಾದನೀಯ. ಆದುದರಿಂದ ಪ್ರಾದೇಶಿಕ ಮಟ್ಟದ ಸಣ್ಣಪುಟ್ಟ ಪತ್ರಿಕೆಗಳನ್ನು ಬೆಳೆಸಲು ಪ್ರೋತ್ಸಹ ಅಗತ್ಯವಿದೆ. ಆದುದರಿಂದ ಮಾಧ್ಯಮಗಳು ಜನಪರವಾಗಿರಬೇಕು. ಪತ್ರಕರ್ತರು ಜನರನ್ನು ದಾರಿ ತಪ್ಪಿಸುವ ಮಾಧ್ಯಮಗಳಾಗದೆ ಜನತೆಯ ಆಶಾಕಿರಣವಾಗಿ ಬೆಳೆಯಬೇಕು. ಪತ್ರಿಕೋಧ್ಯಮದ ಇತಿಹಾಸದಲ್ಲಿ ನಂಬಿಕೆ ಇರಿಸಿ ಮುನ್ನಡೆದರೆ ನಿಮ್ಮ ಯಶಸ್ಸು ಸಾಧ್ಯ. ಓದುವುದು ಪತ್ರಕರ್ತರ ಶಕ್ತಿಯದರೆ ಪ್ರಶ್ನೆಗಳಲೇ ಪತ್ರಕರ್ತರ ಅಸ್ತ್ರವಾಗಿದೆ. ಆದರೆ ಪ್ರಶ್ನಿಸುವ ರೀತಿ ಮಾತ್ರ ಕೆಣಕುವ ಭಾಷೆಯಿಂದ ದೂರವಿರಿ ಎಂದು ಪತ್ರಕರ್ತ ಮಟ್ಟು ಸಲಹಿದರು.

ಸದ್ಯದ ಕಾಲದಲ್ಲಿ ಸಲಹೆಗಳನ್ನು ನೀಡುವುದೆಂದರೆ ದ್ವೇಷದ ಕೆಲಸ ಎಂದೆಣಿಸುವ ಕಾಲವಾಗಿ ಪರಿಣಮಿಸಿದೆ. ಇಂತಹ ಸನ್ನಿವೇಶದಲ್ಲಿ ಸಲಹೆಗಳನ್ನು ನೀಡಿ ಸಮಾಜವನ್ನು ತಿದ್ದುವ ಕೆಲಸ ಮಾಡುವ ಪತ್ರಕರ್ತನ ಸೇವೆಯನ್ನು ಮನವರಿಸಿ ಪತ್ರಕರ್ತರ ಸಂಘವೇ ನನ್ನನ್ನು ಅಭಿನಂದಿಸಿರುವುದು ನನಗೆ ಅಭಿಮಾನ ಎಣಿಸುತ್ತಿದೆ. ಮುಂಬಯಿ ಮಣ್ಣಿನಲ್ಲಿ ಸಾಹಸ ಗುಣವಿದೆ. ಹೋರಾಟದ ಸಾಧಕರಿಗೆ ಜಯ ನೀಡುವ ಭೂಮಿಯೂ ಹೌದು. ಸಾಮಾನ್ಯ ಮನುಷ್ಯರಿಗೆ ಹೇಳಿ ಸೃಷ್ಠಿಸಿದ ಊರೇ ಮುಂಬಯಿ. ಇಂತಹ ಕರ್ಮಭೂಮಿಯನ್ನು ಜನ ಇಷ್ಟ ಪಡುತ್ತಾರೆ. ಅದರಲ್ಲೂ ತುಳು-ಕನ್ನಡಿಗರು ಅತೀವವಾಗಿ ಪ್ರೀತಿಸಿ ಸೇವೆಯನ್ನು ಸಲ್ಲಿಸುತ್ತಿರುವ ವೃತ್ತಾಂತ ಜೀವನದ ಮಧ್ಯೆಯಲ್ಲೊಂದು ಕನ್ನಡಿಗರ ಪತ್ರಕರ್ತರ ಸಂಘವು ಸಕ್ರೀಯವಾಗಿ ಕಾರ್ಯನಿರತವಾಗಿದೆ ಎಂದು ತಿಳಿಯುವುದೇ ಅಭಿಮಾನದ ವಿಚಾರ. ಇಲ್ಲಿನ ಜನರೇ ಸಂಘಟನಾ ಚತುರರು. ಆ ಮಧ್ಯೆ ಸಾಮಾಜಿಕ ಜವಾಬ್ದಾರಿಹೊತ್ತ ಪತ್ರಕರ್ತರು ಸಾಂಘಿಕವಾಗಿ ಮುನ್ನಡೆಯುತ್ತಿರುವು ದು ಆಶ್ಚರ್ಯ ತರುತ್ತದೆ.

ಪತ್ರಿಕೆಗಳು ಜನತೆ ಅಥವಾ ಓದುಗರ ಪರವಾಗಲು ಸಾಧ್ಯವಾಗದ ಈ ಕಾಲದಲ್ಲಿ ಪತ್ರಿಕೋದ್ಯಮಕ್ಕೆ ಓದುಗರ ಋಣವಿದೆ. ಇದನ್ನು ಮೀರಿ ಬೆಳೆದಾಗಲೇ ಓದುಗನೇ ಪತ್ರಿಕೋದ್ಯಮದ ಒಡೆಯನಾಗಲು ಸಾಧ್ಯ. ನ್ಯಾಯಾಂಗ ಮತ್ತು ಮಾಧ್ಯಮಗಳಿಂದ ಮಾತ್ರ ವಿರೋಧಶಕ್ತಿ ಸೃಷ್ಠಿಯ ಸಾಧ್ಯವಾಗಿರುವಾಗ ಪತ್ರಿಕೆಗಳು ಸತ್ಯವನ್ನು ತಿಳಿಸಬೇಕು. ಅಪಪ್ರಚಾರದ ವಸ್ತುಗಳಾಗಿ ಪತ್ರಿಕೆಗಳು ಮಾರಲ್ಪಡ ಬಾರದು ಎಂದು ಮೀಡಿಯಾ ಮ್ಯಾನೇಜ್ ಹಿಡಿತ ಸಾಧಿಸುವ ಸುದ್ದಿ ಖರೀದಿ (ಪೈಯ್ಡ್ ನ್ಯೂಸ್) ಪ್ರವತ್ತಿ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ನೆರೆದ ಪತ್ರಕರ್ತ ಮಿತ್ರರನ್ನುದ್ದೇಶಿಸಿ ಮಟ್ಟು ಮಾತನಾಡಿ ಮಹಾರಾಷ್ಟ್ರ-ಕರ್ನಾಟಕ ರಾಜ್ಯದ ಮಾಧ್ಯಮ ಸಹೋದ್ಯೋಗಿಗಳ ಆರೋಗ್ಯದಾಯಕ ಚರ್ಚೆಗೆ ತನ್ನನ್ನು ನೇರವಾಗಿ ಪತ್ರಕರ್ತರು ಸಂಪರ್ಕಿಸಬಹುದಾಗಿ ದಿನೇಶ್ ಮಟ್ಟು ತಿಳಿಸಿದರು.

ರವಿ.ರಾ.ಅಂಚನ್ ಮಾತನಾಡಿ ಸಾಂಘಿಕತೆಯಿಂದ ಒಗ್ಗೂಡಿ ಸಂಕ್ರಮಣ ಕಾಲದಲ್ಲಿ ಈ ಸಂಸ್ಥೆ ನಿಂತಿದೆ. ಸ್ವರೂಪ ನಿರ್ಮಾಣ ಹೊಂದಿದ ಈ ಪತ್ರಕರ್ತರ ಸಂಘ ಸೇವೆಗಾಗಿ ಕೇಂದ್ರವನ್ನು ತೆರೆದು ಚಟುವಟಿಕೆಗಳಿಂದ ಮೆರೆಯುತ್ತಿರುವುದು ಅಭಿಮಾನ ತಂದಿದೆ. ಸಂಘವು ಪತ್ರಿಕೋದ್ಯಮದ ಹೊಸತನ, ನವ ಪತ್ರಕರ್ತ ಜನರನ್ನು ಬೆಳೆಸುವಂತಾಗಬೇಕು. ಮಾಧ್ಯಮ ಲೋಕದ ಚಿಂತನೆ ಈ ಸಂಘದ ಸಾಧನೆಯಾಗಬೇಕು. ತಳಸ್ಪರ್ಶಿ ಚಿಂತನೆಗಳನ್ನು ಗುರುತಿಸುವ ಮೂಲಕ ಪತ್ರಿಕೋದ್ಯಮದ ಭೌತಿಕ ಬೆಳವಣಿಗೆ ಮೂಢಿಸಿ ಸೇವಾ ನಿರತವಾಗಲಿ ಎಂದರು.

ಚಂದ್ರಶೇಖರ ಪಾಲೆತ್ತಾಡಿ ಅವರು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ ಹೊರನಾಡ ಮುಂಬಯಿ ಇಲ್ಲಿನ ಕನ್ನಡಿಗ ಪತ್ರಕರ್ತರಿಗೆ ಪತ್ರಿಕಾ ಭವನದ ಅವಶ್ಯಕತೆ, ಅನಿವಾರ್ಯತೆ ಹಾಗೂ ಸಂಘದ ಕಾರ್ಯ-ಚಟುವಟಿಕೆ ಇತ್ಯಾದಿಗಳನ್ನು ತಿಳಿಸಿದರು. ಪತ್ರಿಕಾ ಭವನದಿಂದ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಮಹಾರಾಷ್ಟ್ರ-ಕರ್ನಾಟಕ (ಒಳ-ಹೊರನಾಡು) ಗಳಲ್ಲಿನ ಪತ್ರಕರ್ತರ ಒಗ್ಗೂಡುವಿಕೆಯೊಂದಿಗೆ ಪತ್ರಿಕೋದ್ಯಮ ತನ್ನ ನೆಲೆಯನ್ನು ಭದ್ರಗೊಳಿಸಿ ಇಲ್ಲಿನ ತುಳು-ಕನ್ನಡಿಗ ಸಂಸ್ಥೆಗಳಿಗೂ ಪತ್ರಿಕಾ ಭವನ ವರದಾನ ಆಗುವ ಬಗ್ಗೆ ತಿಳಿಸಿ ಸಂಘದ ಉದ್ದೇಶಗಳನ್ನು ಯೋಜನೆಗಳಾಗಿಸಿ ಮುನ್ನಡೆಯಲು ಕರ್ನಾಟಕ ಸರಕಾರದ ಸಹಯೋಗ, ನೆರವು ಕೂಡ ಅಗತ್ಯವಾಗಿದೆ ಎಂದು ತಿಳಿಸಿದರು.

2014ರ ಮೇ 31 ಮುಂಬಯಿಯ ಕನ್ನಡಿಗ ಪತ್ರಿಕೋದ್ಯಮ ಸಂಘಟನೆಯ ಇತಿಹಾಸದಲ್ಲಿ ಗಮನೀಯವಾದ ದಿನ. ವಿಚಾರಶೀಲ ಪತ್ರಕರ್ತ, ನಾಡಿನ ಖ್ಯಾತ ಅಂಕಣಕಾರ ಸದ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹಾಗಾರ ಆಗಿರುವ ದಿನೇಶ್ ಅಮೀನ್ ಮಟ್ಟು ಅವರು ಸ್ವಯಂಪ್ರೇರಿತರಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಂಘಟನಾ ಚತುರತೆಯನ್ನು ಮೆಚ್ಚಿ ಸಂಘದ ಪತ್ರಿಕಾ ಭವನಕ್ಕೆ ಭೇಟಿ ನೀಡಿ ಸದಸ್ಯರ ಜೊತೆ ಸಂವಾದ ನಡೆಸಿದ ಸುದಿನವಿದು. ಕನ್ನಡದ ಕರಾವಳಿಯಾದ ಹೆಜಮಾಡಿ ಮಟ್ಟು ಅಲ್ಲಿ ಜನಿಸಿ ಅತೀ ಬಡತನದಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಪೂರೈಸಿ ಬದುಕನ್ನು ಹರಿಸಿ ಬಂದವರು ದಿನೇಶ್ ಅಮೀನ್. ಮುಂಬಯಿ ಬದುಕಿನ ಸೂತ್ರವಾದ ಕಲಿಕೆಯೊಂದಿಗೆ ಗಳಿಗೆಯನ್ನು ತನ್ನ ಬದುಕಿಗೆ ಅಳವಡಿಸಿ ತಾನೇ ತನ್ನ ಶ್ರೇಯದ ಸೂತ್ರಕಾರನಾಗಿ ಅದೂ ಅತೀ ಸೂಕ್ಷ್ಮ ವೃತ್ತಿಯಾದ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಮುಂಬಯಿಯನ್ನು ತನ್ನೊಳಗೆ ಹರಗಿಸಿಕೊಂಡು ಕನ್ನಡದ ಪತ್ರಿಕೋದ್ಯಮದ ಮುಖ್ಯವಾಹಿಸಿನಿಗೆ ಮುಂಬಯಿಯ ಕೊಡುಗೆ ಎಣಿಸಿರುವ ದಿನೇಶ್ ಅಮೀನ್ ಮಟ್ಟು ಮುಂಬಯಿಯಲ್ಲಿನ ಕನ್ನಡಿಗ ಪತ್ರಕರ್ತರ ಸಂಘದ ಭವನಕ್ಕೆ ತಾನಾಗಿಯೇ ಭೇಟಿ ಕೊಟ್ಟದ್ದೂ ನಿಜಕ್ಕೂ ಅಪೂರ್ವ ಕ್ಷಣವಾಯಿತು ಎಂದು ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರು ಪ್ರಾಸ್ತವಿಕ ನುಡಿಗಳನ್ನಾಡಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮ್ ಎಂ.ಹಂಧೆ ವಂದನಾರ್ಪಣೆಗೈದರು. ಸಭೆಯಲ್ಲಿ ಸಂಘದ ಜತೆ ಕಾರ್ಯದರ್ಶಿ ಪ್ರೇಮನಾಥ್ ಬಿ. ಶೆಟ್ಟಿ ಮುಂಡ್ಕೂರು, ಕಾರ್ಯಕಾರಿ ಸಮಿತಿ ಸದಸ್ಯ ಗುರುದತ್ತ್ ಪೂಂಜಾ ಮುಂಡ್ಕೂರು, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ವಿಶ್ವನಾಥ್ ಅಮೀನ್ ನಿಡ್ಡೋಡಿ, ರಮೇಶ್ ಉದ್ಯಾವರ, ಶ್ರೀಧರ್ ಉಚ್ಚಿಲ್, ಸಾ.ದಯಾ, ಹ್ಯಾರಿ ಆರ್.ಸಿಕ್ವೇರಾ , ಆರೀಫ್ ಕಲ್ಕಟ್ಟಾ, ವಸಂತ್ ಪೂಜಾರಿ ಉಪಸ್ಥಿತರಿದ್ದು, ಪ್ರಶ್ನೋತ್ತರಗಳಲ್ಲಿ ಸಹಭಾಗಿಗಳಾದರು.

LEAVE A REPLY

Please enter your comment!
Please enter your name here