ಬೆಂಗಳೂರು, ಅ.16: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ನಿಯೋಗವು ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಬೆಂಗಳೂರಿನ ವಿಧಾನ ಸೌಧದಲ್ಲಿನ ಸಿಎಂ ಅಧಿಕೃತ ಕಛೇರಿಯಲ್ಲಿ ಮುಖ್ಯಮಂತ್ರಿ ಹೆಚ್. ಸಿದ್ಧರಾಮಯ್ಯ ಅವರನ್ನು ಭೇಟಿ ನೀಡಿತು.

ಕರ್ನಾಟಕ ಸರಕಾರವು ನವಿ ಮುಂಬಯಿಯ ವಾಶಿಯಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಕಛೇರಿಗೆ ಸ್ಥಳಾವಕಾಶ ಮತ್ತು ಸಂಘವು ಹಮ್ಮಿಕೊಂಡಿರುವ`ಕನ್ನಡಿಗ ಪತ್ರಕರ್ತರ ಭವನ ಮುಂಬಯಿ’ ಹಾಗೂ ಸಂಘದ ಸದಸ್ಯರ `ಆರೋಗ್ಯನಿಧಿ’ಗಾಗಿ ರೂಪಿಸಿರುವ ಬೃಹತ್ ಯೋಜನೆಗೆ ನೆರವು ಕೋರಿ ಪತ್ರಕರ್ತರ ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮುಂಬಯಿಯಲ್ಲಿ ನೆಲೆಸಿರುವ ಹೊರನಾಡ ಕನ್ನಡಿಗ ಜನತೆಗಾಗಿ ಕರ್ನಾಟಕ ಸರಕಾರವು ನವಿಮುಂಬಯಿ ಇಲ್ಲಿನ ವಾಶಿಯಲ್ಲಿ ಸಿಡ್ಕೋ ಹಂಚಿಕೆಯ ಸೆಕ್ಟರ್ 30ರಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಸಮಲೋಚನಾ ಕೊಠಡಿ ಮತ್ತು ಕಛೇರಿಯನ್ನು ಒದಗಿಸುವರೇ ಸಂಘವು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿತು.

ಹೊರನಾಡ ಹಿರಿಯ ಪತ್ರಕರ್ತರ ಸುಮಾರು ಏಳೂವರೆ ದಶಕದ ಕನಸು ನನಸಾಗಿಸಿ, ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ಏಳು ವರ್ಷಗಳ ಹಿಂದೆ ರೂಪುಗೊಂಡ ಕನ್ನಡಿಗ ಪತ್ರಕರ್ತರ ಸಂಘದಲ್ಲಿ ಮಹಾರಾಷ್ಟ್ರ ರಾಜ್ಯದಾದ್ಯಂತದ ಸುಮಾರು 130 ಸದಸ್ಯರು ಗಳಿದ್ದಾರೆ. ಕರ್ನಾಟಕ ರಾಜ್ಯದಿಂದ ಪ್ರಕಾಶಿತಗೊಳ್ಳುವ ಪ್ರಮುಖ ಎಲ್ಲಾ ಕನ್ನಡ ಮತ್ತಿತರ ದೈನಿಕಗಳು ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಕ್ಷಣಕ್ಷಣಕ್ಕೂ ವರದಿಗಳನ್ನು ಮಾಡುತ್ತಿದ್ದಾರೆ. ಆದರೆ ಯಾವುದೇ ತರದ ಪತ್ರಿಕಾಗೋಷ್ಠಿಗಳನ್ನು ಹಮ್ಮಿಕೊಳ್ಳಲು ಸಂಘಕ್ಕೆ ಸ್ವಂತದ ಕಛೇರಿ ಅಥವಾ ಸಮಲೋಚನಾ ಕೊಠಡಿಯೂ ಇಲ್ಲವಾಗಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ರೋನ್ಸ್ ಬಂಟ್ವಾಳ್ ವಿವರಿಸಿದರು.

ಸಿಟಿ ಆ್ಯಂಡ್ ಇಂಡಸ್ಟ್ರೀಯಲ್ ಡೆವಲಪ್‍ಮೆಂಟ್ ಕಾಫೆರ್Çರೇಶನ್ ಲಿಮಿಟೆಡ್ ಇವರಿಂದ ಕರ್ನಾಟಕ ಸರಕಾರವು ಖರೀದಿಸಿದ ಸ್ಥಳದಲ್ಲಿ ಸರಕಾರದ ಅಧೀನತೆಯಲ್ಲಿ ಮೈಸೂರು ಸೇಲ್ಸ್ ಇಂಟರ್ ನೇಷನಲ್ ಲಿಮಿಟೆಡ್ (ಎಂಐಸಿಎಲ್) ಇದರ ಹೊಣೆಗಾರಿಕೆಯಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಸಮಲೋಚನಾ ಕೊಠಡಿ ಮತ್ತು ಕಛೇರಿಯನ್ನು ಒದಗಿಸುವಂತೆ ಸ್ಥಳಾವಕಾಶ ಒದಗಿಸುವಂತೆ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಮಾರ್ಗದರ್ಶನದಂತೆ ಮನವಿ ಮಾಡಲಾಯಿತು.

ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿರುವುದಾಗಿ ರೋನ್ಸ್ ಬಂಟ್ವಾಳ್ ತಿಳಿಸಿದ್ದು, ಈ ಸಂದರ್ಭದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಭವನ ಸಮಿತಿ ಕಾರ್ಯಾಧ್ಯಕ್ಷ ಶಿವ ಮೂಡಿಗೆರೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ರಿಪೆರ್ಟರ್ಸ್ ಗೀಲ್ಡ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರ್, ಬೆಳ್ತಂಗಡಿ ಶಾಸಕ ವಸಂತ್ ಬಂಗೇರಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here