ಮುಂಬಯಿ, ಜು.03: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಇದೇ ಮೊತ್ತಮೊದಲಾಗಿ ಮಹಾರಾಷ್ಟ್ರದ ಕರ್ಮಭೂಮಿಯಲ್ಲಿ ಪತ್ರಕರ್ತರ ದಿನಾಚರಣೆಯನ್ನು ಸಂಭ್ರಮಿಸಿ ಮಹಾರಾಷ್ಟ್ರದಲ್ಲೊಂದು ಮತ್ತೆ ಇತಿಹಾಸ ರೂಪಿಸಿತು.

ಇಂದಿಲ್ಲಿ ಬುಧವಾರ ಪೂರ್ವಾಹ್ನ ಮುಂಬಯಿ ಉಪನಗರ ವಿಕ್ರೋಲಿ ಪಶ್ಚಿಮದ ಪಾರ್ಕ್‍ಸೈಟ್ ಇಲ್ಲಿರುವ ಕೈಲಾಸ್ ಕಾರ್ಪೊರೇಟ್ ಲಾಂಜ್‍ನ ಸಾಯಿಕೇರ್ ಸಮಾಲೋಚನಾ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮೋಲ್ಲಾಸದಿಂದ ಪತ್ರಕರ್ತರ ದಿನಾಚರಣೆಯನ್ನು ಸಂಭ್ರಮಿಸಿ ಸಂಘದ ಸದಸ್ಯರಿಗೆ ಸದಸ್ಯತ್ವ ಗುರುತುಪತ್ರ ಪ್ರದಾನಿಸಿತು. ಇದೇ ಶುಭಾಸರದಲ್ಲಿ ಸಂಘವು ಹಮ್ಮಿಕೊಂಡಿರುವ ಯೋಜನೆಯಲ್ಲೊಂದಾದ `ಕನ್ನಡ ಪತ್ರಕರ್ತರ ಭವನ ಮುಂಬಯಿ’ ಯೋಜನಾ ಆರ್ಥಿಕ ನೆರವು ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿತು.

ಜರಗಿಸಲಾದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಯಿಕೇರ್ ಲಾಜೆಸ್ಟಿಕ್ಸ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಸುರೇಂದ್ರ ಎ.ಪೂಜಾರಿ ಉಪಸ್ಥಿತರಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು. ಗೌರವ ಅತಿಥಿಗಳಾಗಿ ಉಪಸ್ಥಿತ ವೈಬ್ರಂಟ್ ಎಕ್ಸ್ಪೋ ಟೆಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಆರ್ ರಾವ್ ಅವರು ಪತ್ರಕರ್ತರ ಭವನದ ಯೋಜನಾ ನೆರವು ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿದರು.

ಚಲನಚಿತ್ರ ನಿರ್ಮಾಪಕ ಗ್ರೇಗೊರಿ ಡಿ’ಅಲ್ಮೇಡಾ, ಪತ್ರಕರ್ತರ ಸಂಘದ ಪ್ರಧಾನ ಸಲಹಾಗಾರುಗಳಾದ ಮುಂಬಯಿ ಹೈಕೋರ್ಟ್‍ನ ನ್ಯಾಯವಾದಿಕೆ.ಪಿ ಪ್ರಕಾಶ್ ಎಲ್. ಶೆಟ್ಟಿ ಮತ್ತು ಮಹಾನಗರದಲ್ಲಿನ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಐ.ಆರ್ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್ಕ ತಜ್ಞ ಡಾ| ಆರ್.ಕೆ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘದ ಸದಸ್ಯರಿಗೆ ಸದಸ್ಯತ್ವ ಗುರುತುಪತ್ರ ಪ್ರದಾನಿಸಿ ಶುಭಕೋರಿದರು.

ಸುರೇಂದ್ರ ಪೂಜಾರಿ ,ಬಿ.ಆರ್ ರಾವ್ ,ಐ.ಆರ್ ಶೆಟ್ಟಿ , ಪ್ರಕಾಶ್ ಎಲ್. ಶೆಟ್ಟಿ ಪತ್ರಕರತರಿಗೆ ಕಿವಿಮಾತುಗಳನ್ನಿತ್ತರು. ಡಾ| ಆರ್.ಕೆ ಶೆಟ್ಟ್ಟಿ ಶುಭಕೋರಿದರು.

ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಉಪಸ್ಥಿತ ಸಂಘದ ವಿಶೇಷ ಆಮಂತ್ರಿತ ಸದಸ್ಯ ನ್ಯಾ| ವಸಂತ ಎಸ್.ಕಲಕೋಟಿ, ಸಲಹಾ ಸಮಿತಿಯ ಸದಸ್ಯರುಗಳಾದ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು ಹಾಗೂ ಬಂಟರವಾಣಿ ಮಾಸಿಕದ ಗೌರವ ಸಂಪಾದಕ ರತ್ನಾಕರ್ ಆರ್.ಶೆಟ್ಟಿ, ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ಅಕ್ಷಯ ಮಾಸಿಕದ ಸತೀಶ್ ಎನ್.ಬಂಗೇರಾ, ಸಂಬಂಧ ಮಾಸಿಕದ ಸಂಪಾದಕ ಶ್ರೀನಿವಾಸ್ ಜೋಕಟ್ಟೆ , ಸಮಾಜ ಸೇವಕರುಗಳಾದ ಎನ್.ಕೆ ಬಿಲ್ಲವ, ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತಿತರರನ್ನು ಪುಷ್ಫ ಗೌರವಿಸಿದರು.

ಉಪಾಧ್ಯಕ್ಷ ದಯಾ ಸಾಗರ್ ಚೌಟ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಗೌ| ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರ್ವಹರ್ಣೆ ನಿರ್ವಹಿಸಿದರು. ಗೌ| ಕೋಶಾಧಿಕಾರಿ ಜಿ.ಪಿ ಕುಸುಮಾ ಧನ್ಯವಾದ ಸಮರ್ಪಿಸಿದರು.

ಕನ್ನಡಿಗ ಪತ್ರಕರ್ತರ ಸ0ಘ ಮಹಾರಾಷ್ಟ್ರ ಭವನ ನಿಧಿಸ0ಚಯನಕ್ಕೆ ಚಾಲನೆ:
ಮು0ಬಯಿ ಕನ್ನಡ ಮಾಧ್ಯಮ ಪ್ರತಿನಿಧಿಗಳದ್ದು
ಸ್ವಾರ್ಥ ರಹಿತ ಕಾಯಕ: ಸುರೇ0ದ್ರ ಪೂಜಾರಿ

ಮು0ಬಯಿ: ಜುಲೈ 3: ಒಳ್ಳೆಯ ಮನಸಿರುವಲ್ಲೆಲ್ಲಾ ದೇವರು ಇರುತ್ತಾನೆ, ಮು0ಬಯಿಯಲ್ಲಿ ಕನ್ನಡಿಗರ ಚಟುವಟಿಕೆಗಳನ್ನು, ಮಾಹಿತಿಗಳನ್ನು ಜಗದಗಲ ತಲುಪಿಸುವ ಕನ್ನಡ ಪತ್ರಕರ್ತ ಮಿತ್ರರಿಗೆ ಯಾವುದೇ ಸ್ವಾರ್ಥ ಇಲ್ಲ, ಅವರ ಸ0ಘಟನೆಯ ಜೊತೆ ಗುರುತಿಸಿಕೊಳ್ಳಲು ಸ0ತಸ ವಾಗುತ್ತದೆ ಎ0ದು ಖ್ಯಾತ ಉದ್ಯಮಿ , ಕನ್ನಡಾಭಿಮಾನಿ, ದಾನಿ ಹಾಗೂ ಸಾಯಿಕೇರ್ ಲಾಜಿಸ್ಟಿಕ್ಸ್ ನ ಮ್ಯಾನೇಜಿ0ಗ್ ಡೈರೆಕ್ಟರ್ ಶ್ರೀ ಸುರೇ0ದ್ರ ಕೆ ಪೂಜಾರಿ ನುಡಿದರು.

ಪೊವಾಯಿ ಕೈಲಾಶ್ ಕಾ0ಪ್ಲೆಕ್ಸ್ ನಲ್ಲಿ, ನಡೆದ ಕನ್ನಡಿಗ ಪತ್ರಕರ್ತರ ಸ0ಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನದ ಯೋಜನಾ ಮನವಿ ಪತ್ರ ಬಿಡುಗಡೆ ಮತ್ತು ಸದಸ್ಯತ್ವ ಗುರುತು ಪತ್ರ ಪ್ರದಾನ ಸಮಾರ0ಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಕನ್ನಡಿಗ ಪತ್ರಕರ್ತ ಸ0ಘದ ಭವನದ ಯೋಜನೆಗೆ ಎಲ್ಲರೂ ನೆರವಾಗಬೇಕು, ಈ ಮಹಾನಗರದ ಕನ್ನಡಿಗರು ಎಲ್ಲರೂ ಈ ನಿಟ್ಟಿನಲ್ಲಿ ಮು0ದಡಿ ಇಡುವರು ಎ0ದು ಅವರು ಅಭಿಪ್ರಾಯ ಪಟ್ಟರು.

ಕನ್ನಡಿಗ ಪತ್ರಕರ್ತರು ಮು0ಬಯಿಯಲ್ಲಿ ಕಳೆದ ಹಲವು ವರ್ಷಗಳಿ0ದ ಪತ್ರಿಕೋದ್ಯಮದ ಜೊತೆಗೇ ಕನ್ನಡ ಭಾಷೆಯ ಸೇವೆಯನ್ನೂ ಮಾಡುತ್ತಲಿದ್ದಾರೆ, ಅವರ ಕನಸಿನ ಭವನ ನಿರ್ಮಾಣವಾಗಬೇಕು. ಅದಕ್ಕೆ ದಾನಿಗಳ ನೆರವು ಹರಿದು ಬರಬೇಕು ಎ0ದು ಅತಿಥಿ ಉದ್ಯಮಿ ಭಿ . ಆರ್ ರಾವ್ ನುಡಿದರು.

ಕನ್ನಡಿಗ ಪತ್ರಕರ್ತರ ಸ0ಘ ಮಹಾರಾಷ್ಟ್ರ ಇದೊ0ದು ಶಕ್ತಿಯುತ ಸ0ಘಟನೆ. ಇಲ್ಲಿ ಪ್ರಾಮಾಣಿಕ ಮನೋಭಾವ, ಪರಿಶ್ರಮ, ವೃತ್ತಿಪರತೆ ಮತ್ತು ಸ0ಘಟನಾ ಪರತೆಯೂ ಇದೆ ಎ0ದು ಇದೇ ವೇಳೆ, ಖ್ಯಾತ ಲೆಕ್ಕ ಪರಿಶೋಧಕ ಐ ಆರ್ ಶೆಟ್ಟಿ ನುಡಿದರು.ಸ0ಘದ ಕೆಲಸಕ್ಕಾಗಿ ಸದಾ ನನ್ನ ನೆರವು ಲಭ್ಯ ಎ0ದೂ ಅವರು ನುಡಿದರು.

ಸ0ಘದ ಸಲಹಾಕಾರ ಖ್ಯಾತ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಮಾತನಾಡಿ, ಮು0ಬಯಿಯ ಬಹುತೇಕ ಎಲ್ಲ ಉದ್ಯಮಿಗಳು, ಕಲಾವಿದರು ಸಾಧಕರು ಕನ್ನಡ ಪತ್ರಿಕಾ ಮಾಧ್ಯಮದ ಲಾಭ ಪಡೆದವರೇ. ಎಲ್ಲರೂ ಮನ ಮಾಡಿದರೆ ಸ0ಘದ ಭವನದ ಯೋಜನೆ ಈಡೇರಲು ಕಷ್ಟವೇ ಆಗದು ಎ0ದರು.

ಇನ್ನೊಬ್ಬ ಸಲಹಾಕಾರ ಖ್ಯಾತ ಆದಾಯತೆರಿಗೆ ಮತ್ತು ವಿಮಾ ಸಲಹಾಕಾರ ಆರ್ ಕೆ ಶೆಟ್ಟಿ ಕನ್ನಡಿಗ ಪತ್ರಕರ್ತರ ಸ0ಘ ದ ಭವನ ದ ಯೋಜನೆಗೆ ಶುಭ ಹಾರೈಸುತ್ತಾ , ನಾವೆಲ್ಲ ನಿಮ್ಮಿ0ದ ಉಪಕೃತರು. ನಿಮ್ಮ ಸಾಹಸಕ್ಕೆ ಕೈ ಜೋಡಿಸುತ್ತೇವೆ ಎ0ದರು.

ನಮ್ಮಿ0ದ ಸಾಧ್ಯವಾದ ಪತ್ರಿಕಾ ಸೇವೆಯನ್ನೂ ಹಲವು ದಶಕಗಳಿ0ದ ಮಾಡಿದ್ದೇವೆ. ಸ0ಘಟನೆಯನ್ನು ಶಿಸ್ತು ಬದ್ದವಾಗಿ ಕಟ್ಟಿದ್ದೇವೆ. ಇದೀಗ ನಮ್ಮದೇ ಆದ ಕಚೇರಿ, ಭವನದ ಯೋಜನೆಗೆ ಮು0ದಾಗಿದ್ದೇವೆ. ಎ0ದು ನುಡಿದ ಸಮಾರ0ಭದ ಅಧ್ಯಕ್ಷ ಚ0ದ್ರಶೇಖರ ಪಾಲೆತ್ತಾಡಿ , ನೀವ್ ನೀಡುವ ಹಣಕಾಸು ನೆರವು ಖ0ಡಿತವಾಗಿಯೂ ಒ0ದು ಶಿಸ್ತು ಬದ್ದ , ಸದುದ್ದೇಶಿತ ಕೆಲಸಕ್ಕೆ ನಾ0ದಿಯಾಗುತ್ತದೆ ಎ0ದರು.

ಖ್ಯಾತ ಉದ್ಯಮಿ, ಚಲಚಿತ್ರ ನಿರ್ಮಾಪಕ ಗ್ರೆಗೊರಿ ಅಲ್ಮೇಡಾ ಸದಸ್ಯತ್ವ ಗುರುತು ಪತ್ರ ಪ್ರದಾನ ನೆರವೇರಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here