ಮುಂಬಯಿ, ಸೆ.01: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ತೃತೀಯ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಗುರುವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರೂ ಆದ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕರೂ, ಸಂಘದ ಅಧ್ಯಕ್ಷರೂ ಆದ ಪಾಲೆತ್ತಾಡಿ ಅಧ್ಯಕ್ಷೀಯ ಭಾಷಣಗೈದು ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತ ಸದಸ್ಯರನ್ನು ಹೊಂದಿರುವ ಸಂಘವು ಸವಿಂಧಾನಕತ್ವವಾಗಿ ಗಟ್ಟಿಯಾಗಿ ಬುನಾದಿ ಹೊಂದಿರುವುದೇ ನಮ್ಮ ಹಿರಿಮೆಯಾಗಿದೆ. ನಮ್ಮಲ್ಲಿ ಪತ್ರಕರ್ತರದ್ದೇ ಜಾತಿ ಹಾಗೂ ಧರ್ಮ ಮೈಗೂಡಿಸಿರುವ ಕಾರಣ ಸಂಘದ ಅಡಿಪಾಯ ಕ್ವಚಿತಾಗಿದೆ. ಪತ್ರಕರ್ತರು ಎಂದರೆ ಸಮಾಜಪರ ಸೇವಕರು. ಸಮಾಜಕ್ಕೆ ಸಮರ್ಪಕ ನ್ಯಾಯ ನೀಡುವ ಜನಸೇವಕರೇ ಪತ್ರಕರ್ತರು. ಪತ್ರಿಕೋದ್ಯಮದ ಮೌಲ್ಯಕ್ಕೆ ಬದ್ಧರಾಗಿ ಸಮಾಜದ ಋಣ ತೀರಿಸುವಲ್ಲಿ ನಾವೆಲ್ಲರೂ ಸಾಂಘಿಕವಾಗಿ ಶ್ರಮಿಸೋಣ ಎಂದು ಕರೆಯಿತ್ತರು. ಹಾಗೂ ಸದಸ್ಯರಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದ ಡಾ| ಈಶ್ವರ ಕೆ.ಪೂಜಾರಿ ಅಲೆವೂರು ಮತ್ತು ಡಾ| ಭರತ್ ಕುಮಾರ್ ಪೆÇಲಿಪು ಅವರನ್ನು ಅಭಿನಂದಿಸಿದರು.

ಸಂಸ್ಥಾಪಕ ಗೌ| ಪ್ರಧಾನ ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ವಾಳ್ ಸಂಸ್ಥೆಯ ಬೆಳವಣಿಗೆ ಮತ್ತು ಗತ ಸಾಲಿನ ಕಾರ್ಯ ಚಟುವಟಿಕೆಗಳನ್ನು ತಿಳಿಸಿ ಮಾತನಾಡಿ ಪತ್ರಕರ್ತರು ಮನಸ್ಸನ್ನು ಹತೋಟಿಯಲ್ಲಿಟ್ಟು ಕೆಲಸ ನಿರ್ವಾಹಿಸುವುದು ಉತ್ತಮ. ದಿನಚಾರಿ ಪರಿಮಿತಿ ಒಳಗಿನ ಸೇವೆ ಪತ್ರಕರ್ತರ ಉದ್ದೇಶ ಆಗದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಉದಾರ ಹೃದಯತ್ವವುಳ್ಳವರಾಗಿ ಮುನ್ನಡೆಯುವ ಅವಶ್ಯವಿದೆ. ಸಮಾಜವನ್ನು ಎದುರಿಸುವ ಸಾಮರ್ಥ್ಯವುಳ್ಳವರಾಗಿ ಮುನ್ನಡೆಯುವ ತಾಕತ್ತು ಪತ್ರಕರ್ತರಲ್ಲಿ ಇದ್ದು ಈ ನಿಟ್ಟಿನಲ್ಲಿ ಬುದ್ಧಿವಂತರಾಗಿ ಜಾಗೃತರಾಗುವ ಅವಶ್ಯವಿದೆ. ಪತ್ರಕರ್ತರು ಸಮಾಜಕ್ಕಾಗಿ ಬದುಕುತ್ತಾ ಆರೋಗ್ಯದಾಯಕ ಸಮಾಜವನ್ನು ರೂಪಿಸಲು ಸ್ನೇಹ ಸಂಪರ್ಕದ ವ್ಯಕ್ತಿಗಳಾಗಿ ಪವಿತ್ರವಾದ ವೃತ್ತಿಯನ್ನು ಬೆಳೆಸಿ ಪತ್ರಿಕೋದ್ಯಮವನ್ನು ಪೆÇೀಷಿಸಬೇಕು. ಆ ಮೂಲಕ ಸಮಾಜದ ಕನ್ನಡಿಯಾಗುವ ಪ್ರಯತ್ನ ಮಾಡಬೇಕು. ನಾವು ಮುಂಬಯಿಯಲ್ಲಿನ ಕನ್ನಡಿಗ ಪತ್ರಕರರ್ತರು ಹೊರನಾಡ ಪತ್ರಕರ್ತರಲ್ಲ. ಕರ್ನಾಟಕದ ಒಳನಾಡಿನ ಸೇವೆಗೈಯುವ ಕನ್ನಡಿಗ ಪತ್ರಕರ್ತರಾಗಿದ್ದೇವೆ. ಆದುದರಿಂದ ನಮ್ಮನ್ನು ಯಾರೂ ಮಹಾರಾಷ್ಟ್ರದ ಅಥವಾ ಮುಂಬಯಿ ಕನ್ನಡಿಗರು ಎನ್ನುವ ತಾರತಮ್ಯತೆಯಿಂದ ಕಾಣದೆ ಸರಕಾರದ ವತಿಯಿಂದ ಸಿಗುವ ಎಲ್ಲಾ ಸೌಲತ್ತುಗಳೂ ನಮಗೆ ಸಿಗುವಂತಾಗಬೇಕು ಎನ್ನುವುದೂ ಸಂಘದ ಆಶಯವಾಗಿದೆ. ಪತ್ರಕರ್ತರು ಸದಾ ಬಹುಮುಖಿ ಪ್ರತಿಭೆಗಳಾಗಿ ಯಜಮಾನಿಕೆಯ ಘನತೆ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗಾಂಭೀರ್ಯ, ದಕ್ಷತೆ, ನ್ಯಾಯಪತರೆ, ಪ್ರಾಮಾಣಿಕತೆ ಮೈಗೂಡಿಸಿ ಬೌದ್ಧಿಕ ಮತ್ತು ವೈಜ್ಞಾನಿಕ ಆಸಕ್ತಿಗಳ ಪ್ರೇರಣೆ ಪಡೆದು ಮಾನಸಿಕ ಏಕಾಗ್ರತೆ ಕಂಡುಕೊಳ್ಳೋಣ ಎಂದು ಕರೆಯಿತ್ತರು.

ಸಭೆಯಲ್ಲಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೆ.ಸುವರ್ಣ ಅವರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದು ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಸೇವೆಗೈಯುವ ಪತ್ರಕರ್ತರು ಶ್ರೇಷ್ಠರು. ಅಂತೂ ಹೊರನಾಡ ಕರ್ಮಭೂಮಿಯಲ್ಲಿ ಕನ್ನಡಿಗರ ಪತ್ರಕರ್ತರ ಸಂಸ್ಥೆಯನ್ನು ಹುಟ್ಟುಹಾಕಿ ಪರ ಪ್ರಾಂತ್ಯದಲ್ಲಿ ಮೆರೆಯುವ ನಿಮ್ಮ ಸೇವೆ ಸಾರ್ಥಕವಾಗಲಿ ಎಂದು ಶುಭ ಕೋರಿದರು.

ಸಂಘಕ್ಕೆ ಕಾರಣವಾದ ಅಂಶಗಳು ಮತ್ತು ಅದರ ಸಾದ್ಯಂತ ಬೆಳವಣೆಗೆಯನ್ನೂ ವಿವರಿಸಿದ ದಯಾ ಸಾಗರ್ ಚೌಟ ಮಾತನಾಡಿ ಒಂದು ಶತಮಾನಕ್ಕೂ ಹಿಂದೇಯೇ ಮೊಳೆತು, ಕಳೆದ ಆರು ದಶಕಗಳಿಗೂ ಹಿಂದೆ ಬಲಿತು, ಮೂರು ದಶಕಗಳಿಂದೀಚೆಗೆ, ದಟ್ಟವಾಗಿ, ವಿಸ್ತಾರವಾಗು ದಾಂಗುಡಿಯಿಟ್ಟು ಬೆಳೆದ ಮುಂಬಯಿ ಕನ್ನಡಿಗ ಪತ್ರಿಕೋದ್ಯಮ, ಇದರಲ್ಲಿ ತೊಡಗಿರುವ ಮಂದಿ ಸುಮಾರು ಮೂರು ವರ್ಷಗಳ ಹಿಂದೆ ತಮ್ಮದಾದ ಸಂಘಟನೆಯನ್ನೂ ಹೊಂದುವ ಮೂಲಕ ಪರಿಪೂರ್ಣತೆಯೆಡೆಗೆ ನಡೆಯಿಟ್ಟಿತೆಂದರೂ ತಪ್ಪಗಲಾರದು ಎಂದು ನುಡಿದರು. ಇವತ್ತು ನಮ್ಮ ಮುಂಬಯಿ ಮಹಾನಗರದಲ್ಲಿ ದುಡಿಯುತ್ತಿರುವ ಬಹುತೇಕ ಕನ್ನಡಿಗ ಪತ್ರಕರ್ತರು ಆಥಿರ್sಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಕೆಲವು ಪ್ರಸಂಗಗಳಲ್ಲಿ ಪರಿಸ್ಥಿತಿಯ ಒತ್ತಡ, ಸ್ಥಾಪಿತ ಹಿತಾಸಕ್ತಿಗಳ ದಬ್ಬಾಳಿಕೆಗೂ ಒಳಗಾಗುತ್ತಿದ್ದಾರೆ. ಆದರೆ ನಾವು ಪತ್ರಕರ್ತರು ಈ ರೀತಿಯ ಒತ್ತಡಗಳಿಗೆ ಮಣಿಯುವ ಅವಶ್ಯಕತೆ ಇಲ್ಲ. ನಾವು ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ದುಡಿಯೋಣ ಎಂದು ಕರೆಯಿತ್ತರು.

ಬಹುತೇಕ ಸದಸ್ಯರುಗಳು ಹಾಜರಿದ್ದು, ಪೋಷಕಸದಸ್ಯ ವಿಠಲ್ ಎಸ್ ಪೂಜಾರಿ, ಜನಾರ್ಧನ ಎಸ್. ಪುರಿಯಾ, ನವೀನ್ ಕೆ.ಇನ್ನಾ, ಅಶೋಕ್ ಎಸ್. ಸುವರ್ಣ, ಗುರುದತ್ತ್ ಎಸ್.ಪೂಂಜಾ ಮತ್ತಿತರ ಸಂಘದ ಸದಸ್ಯರು ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಂಘದ ಯಶಸ್ಸಿಗೆ ಶುಭಹಾರೈಸಿದರು.

ಸಂಘದ ಉಪಾದ್ಯಕ್ಷ ಸದಾನಂದ ಡಿ.ನಾಯಕ್ (ಸಂಪಾದಕ, ಕೊಂಕಣಿ ಮಿರರ್ ತ್ರೈಮಾಸಿಕ) ಸ್ವಾಗತಿಸಿದರು. ನಂತರ ಮೌನ ಪ್ರಾರ್ಥನೆಯೊಂದಿಗೆ ಆಗಲಿದ ಎಲ್ಲಾ ಪತ್ರಕರ್ತರಿಗೆ ಚಿರಶಾಂತಿ ಕೋರಲಾಯಿತು. ರೋನ್ಸ್ ಬಂಟ್ವಾಳ್ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಸಂಘದ ಕಾರ್ಯದರ್ಶಿ ದಯಾ ಸಾಗರ್ ಚೌಟ (ಸಂಪಾದಕ, ರಿಲಾಯನ್ಸ್ ಮೊಬಾಯ್ಲ್ ಕನ್ನಡ ನ್ಯೂಸ್) ಗತಸಾಲಿನ ಮಹಾಸಭೆಯ ವರದಿವಾಚಿಸಿ ಸಭೆಯ ಕಾರ್ಯ ಕಲಾಪಗಳನ್ನು ನಡೆಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಸವಿತಾ ಸುರೇಶ್ ಶೆಟ್ಟಿ (ಕರ್ನಾಟಕ ಮಲ್ಲ) ಧನ್ಯವಾದ ಸಮರ್ಪಣೆಗೈದರು.

LEAVE A REPLY

Please enter your comment!
Please enter your name here