ಮುಂಬಯಿ, ಸೆ.24: ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಒಂಬತ್ತನೇ (9) ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ ಮಾತನಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ದಯಾ ಸಾಗರ್ ಚೌಟ, ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಮೂಡಿಗೆರೆ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಆಸೀನರಾಗಿದ್ದು, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ನಂತರ ಸಂಘದ 2017-2018ರ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಮತ್ತೆ ನಾಡಿನ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಮರು ನೇಮಕ ಗೊಳಿಸಲಾಯಿತು. ಸಂಘದ ಸದಸ್ಯರಿಗೆ ಶೀಘ್ರವೇ ಹಮ್ಮಿಕೊಳ್ಳಲಾಗುವ ಕ್ರಿಕೆಟ್ ಪಂದ್ಯಾಟದ ಬಗ್ಗೆ ಜಯ ಸಿ.ಪೂಜಾರಿ ಮಾಹಿತಿಯನ್ನಿತ್ತರು.

ಸಂಘದ ಅಧ್ಯಕ್ಷರಾಗಿದ್ದು ಅವರ ಆತ್ಮಕಥನ `ನಾನು… ನನ್ನ ಸ್ವಗತ’ ಪುಸ್ತಿಕೆ ಅನಾವರಣ ಹಾಗೂ ಅಭಿನಂದನ ಗ್ರಂಥ `ಆಪ್ತಮಿತ್ರ’ ಬಿಡುಗಡೆ ಗೊಳಿಸಿ ಪೌರಸನ್ಮಾನಕ್ಕೆ ಭಾಜನರಾದ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸಲಹಾ ಸಮಿತಿ ಸದಸ್ಯರಾದ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೆಗೋರಿ ಡಿ’ಅಲ್ಮೇಡಾ, ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ನ್ಯಾ| ವಸಂತ ಎಸ್.ಕಲಕೋಟಿ ಅವರು ಸತ್ಕರಿಸಿ ಗೌರವಿಸಿದರು.

ಸಲಹಾ ಸಮಿತಿ ಸದಸ್ಯರನ್ನು, ವಿಶೇಷವಾಗಿ ಉಪಸ್ಥಿತರಿದ್ದ ಕಿರಣ್ ಬಿ.ರೈ ಕರ್ನೂರು, ಹರೀಶ್ ಮೂಡಬಿದ್ರಿ (ಪುಣೆ), ಆರೀಫ್ ಕಲಕಟ್ಟಾ ಮಂಗಳೂರು ಅವರಿಗೆ ಮತ್ತು 2017ನೇ ಸಾಲಿನ ದಿ| ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಸಂಘದ ಸದಸ್ಯ ನವೀನ್ ಕೆ.ಇನ್ನ ಅವರಿಗೆ ಅಧ್ಯಕ್ಷರು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು ಮತ್ತು ಉಮೇಶ್ ಕುಮಾರ್ ಅಂಚನ್ ಅವರಿಗೆ ಸದಸ್ಯತ್ವ ಐಡಿ ಕಾರ್ಡ್ ಪ್ರದಾನಿಸಿದರು.

ರೋಹಿಣಿ ಸಾಲ್ಯಾನ್,  ಸುನೀತಾ ಶೆಟ್ಟಿ , ಮೋಹಿದ್ಧೀನ್ , ಪ್ರಕಾಶ್ ಎಲ್.ಶೆಟ್ಟಿ , ವಸಂತ ಕಲಕೋಟಿ ಮಾತನಾಡಿದರು.ಸದಸ್ಯರ ಪರವಾಗಿ ಕಿರಣ್ ಬಿ.ರೈ, ಹರೀಶ್ ಮೂಡಬಿದ್ರಿ, ಗೋಪಾಲ ತ್ರಾಸಿ, ಜನಾರ್ದನ ಪುರಿಯಾ, ಮಮತಾ ಆರ್.ನಾಯ್ಕ್, ಡಾ| ಈಶ್ವರ ಅಲೆವೂರು, ನವೀನ್ ಕೆ.ಇನ್ನ, ದಿನೇಶ್ ಶೆಟ್ಟಿ ರೆಂಜಾಳ, ದಯಾ ಸಾಗರ್ ಚೌಟ, ಶಿವ ಮೂಡಿಗೆರೆ, ಹರೀಶ್ ಹೆಜ್ಮಾಡಿ ಮಾತನಾಡಿದರು.

ಸಭೆಯಲ್ಲಿ ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ಯಾಮ್ ಎಂ.ಹಂಧೆ, ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಗುರುದತ್ತ್ ಎಸ್. ಪೂಂಜಾ ಮುಂಡ್ಕೂರು, ಡಾ| ದಿನೇಶ್ ಶೆಟ್ಟಿ ರೆಂಜಾಳ, ಸುಜಾನ್ಹಾ ಲಾರೆನ್ಸ್ ಕುವೆಲ್ಲೋ, ಜನಾರ್ಧನ ಎಸ್.ಪುರಿಯಾ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸುರೇಶ್ ಶೆಟ್ಟಿ ಯೆಯ್ಯಾಡಿ, ಶ್ರೀಧರ್ ಉಚ್ಚಿಲ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ಮಮತಾ ಆರ್.ನಾಯ್ಕ್ ಪ್ರಾರ್ಥನೆಯನ್ನಾಡಿದರು. ಬಳಿಕ ಗತ ಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಲಾಯಿತು. ಗೌರವ ಕಾರ್ಯದರ್ಶಿ ಹರೀಶ್ ಹೆಜ್ಮಾಡಿ ಧನ್ಯವದಿಸಿದರು.

LEAVE A REPLY

Please enter your comment!
Please enter your name here