(ಚಿತ್ರ/ವರದಿ : ರೋನ್ಸ್ ಬಂಟ್ಟಾಳ್)

ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ಪ್ರಪ್ರಥಮ ವಾರ್ಷಿಕ ಮಹಾಸಭೆಯು ಇಂದಿಲ್ಲಿ (23.08.2009) ಆದಿತ್ಯವಾರ ಅಪರಾಹ್ನ ಮುಂಬಯಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಹಾಗೂ ಸಂಘದ ಅಧ್ಯಕ್ಷರೂ ಆದ ಚಂದ್ರಶೇಖರ ಪಾಲೆತ್ತಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿದ ಚಂದ್ರಶೇಖರ ಪಾಲೆತ್ತಾಡಿ,ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಾರೆನ್ಸ್ ಕುವೆಲ್ಲೋ (ಸಂಪಾದಕರು, ದಿವೋ ಕೊಂಕಣಿ ಸಾಪ್ತಹಿಕ), ಈಶ್ವರ್ ಅಲೆವೂರು (ಸಹ ಸಂಪಾದಕರು, ಅಕ್ಷಯ ಮಾಸಿಕ), ಸುರೇಶ್ ಆಚಾರ್ಯ (ಉಪ ಸಂಪಾದಕರು, ಉದಯವಾಣಿ ದೈನಿಕ), ಪ್ರೇಮನಾಥ್ ಶೆಟ್ಟಿ ಮುಂಡ್ಕೂರು (ಸಂಪಾದಕರು, ಬಂಟರವಾಣಿ ಮಾಸಿಕ) ಮತ್ತು ವಿಶೇಷ ಆಮಂತ್ರಿತ ಸದಸ್ಯರಾದ ವಸಂತ ಎಸ್. ಕಲಕೋಟಿ (ಮಾಜಿ ವರದಿಗಾರರು ಸಂಯುಕ್ತ ಕರ್ನಾಟಕ ದೈನಿಕ) ಹಾಗೂ ಲೆಕ್ಕಪರಿಶೋಧಕರೂ ಚಾರ್ಟರ್ಡ್ ಎಕೌಂಟೆಂಟ್ ಆಗಿರುವ ಸಿಎ| ಐ.ಆರ್ ಶೆಟ್ಟಿ ಮತ್ತು ಶ್ರೀ ಶಂಕರ್ ಶೆಟ್ಟಿ, ಸಲಹಾದಾರರಾದ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಡಾ| ಸುನೀತಾ ಎಂ. ಶೆಟ್ಟಿ, ಶ್ರೀ ಆರ್.ಕೆ.ಶೆಟ್ಟಿ (ಎಲ್‍ಐಸಿ) ಮತ್ತು ವೈದ್ಯಾಧಿಕಾರಿ ಡಾ| ಸುರೇಶ್ ಎಸ್. ರಾವ್ ಕಟೀಲು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಕೊಂಕಣಿ ಮಿರರ್ ತ್ರೈಮಾಸಿಕದ ಸಂಪಾದಕ ಮತ್ತು ಸಂಘದ ಉಪಾದ್ಯಕ್ಷರಾದ ಸದಾನಂದ ಡಿ.ನಾಯಕ್ ಸ್ವಾಗತಿಸಿದರು. ಸಂಸ್ಥಾಪಕಾ ಗೌ| ಪ್ರಧಾನ ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ವಾಳ್ ಸಂಸ್ಥೆಯ ಬೆಳವಣಿಗೆ ಮತ್ತು ಸಾಧಿಸಿದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಮೊಗವೀರ ಮಾಸಿಕದ ಮಾಜಿ ಸಂಪಾದಕಿ ಹಾಗೂ ಸಂಘದ ಕೋಶಾಧಿಕಾರಿ ಶ್ರೀಮತಿ ಜಿ.ಪಿ.ಕುಸುಮ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಅಧ್ಯಕ್ಷರು ಇವರು ಸಂಘದ ಯಶಸ್ಸಿಗೆ ಸಹಕರಿಸಿದ ಗಣ್ಯರನ್ನು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ರಿಲಾಯನ್ಸ್ ಮೊಬಾಯ್ಲ್ ಕನ್ನಡ ನ್ಯೂಸ್‍ನ ಸಂಪಾದಕ ಹಾಗೂ ಸಂಘದ ಕಾರ್ಯದರ್ಶಿ ದಯಾ ಸಾಗರ್ ಚೌಟ ಸಭೆಯ ಕಾರ್ಯ ಕಲಾಪಗಳನ್ನು ನಡೆಸಿ, ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here